ಕೋಲಾರ – ಮಾಲೂರು ಶಾಸಕರಾದ ಕೆ.ವೈ.ನಂಜೇಗೌಡರು ತಾಲೂಕಿನಲ್ಲಿ ನಿರಂತರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಸ್ವಾಭಿಮಾನಿ ಜನತಾ ಪಕ್ಷದ ತಾಲೂಕು ಅಧ್ಯಕ್ಷ ಕೆ ಆರ್ ಪ್ರಭಾಕರ್ ಆರೋಪಿಸಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೆ ವೈ ನಂಜೇಗೌಡರು ಮಾಲೂರು ತಾಲೂಕಿನಲ್ಲಿ ಎರಡನೆ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 7 ವರ್ಷಗಳ ಕಾಲ ಆಡಳಿತ ನಡೆಸಿದರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಶಾಸಕರ ವಿರುದ್ದ ವಾಗ್ದಾಳಿ ನಡೆಸಿದರು. ಕೋಲಾರ ಚಿಕ್ಕಬಳ್ಳಾಪುರ ಡೇರಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆಸಿದ್ದಾರೆ. ಡೇರಿ ನೇಮಕಾತಿಯಲ್ಲಿ 150 ಕೋಟಿ ರೂಪಾಯಿಗಳ ಅವ್ಯವಹಾರವಾಗಿದೆ. ಇಡಿ ತನಿಖೆಯಲ್ಲಿ ಅಕ್ರಮ ವೆಸಗಿರುವುದು ಸಾಬೀತಾಗಿದೆ. ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳ ಪ್ರತಿಯೊಂದು ಇಲಾಖೆಯಿಂದ ವಸೂಲಿಯನ್ನು ನಡೆಸುತ್ತಿದ್ದಾರೆ. ನೀವು ಮಾಡಿದ ಪಾಪಗಳಿಗೆ ಅಧಿಕಾರಿಗಳು ಸಸ್ಪೆಂಡ್ ಆಗುತ್ತಿದ್ದಾರೆ ಎಂದು ಆರೋಪಿಸಿದರು