ಕೋಲಾರ:- ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ನೀಡಿದ್ದಾರೆ.
Rape And Murder Case: ಕೋಲ್ಕತಾ ವೈದ್ಯೆ ಹತ್ಯೆ ಬಳಿಕ ಹೊಸ ರೂಲ್ಸ್: ಮಹಿಳೆಯರಿಗೆ ನೈಟ್ ಶಿಫ್ಟ್ ಹಾಕುವಂತಿಲ್ಲ
ಈ ಸಂಬಂಧ ಕೋಲಾರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಅವರ ೪೦ ವರ್ಷದ ರಾಜಕಾಣದಲ್ಲಿ ತಪ್ಪು ಮಾಡಿಲ್ಲ. ಪ್ರಾಸ್ಯಿಕೂಷನ್ ವಿರುದ್ದ ಕಾನೂನು ಹೋರಾಟ ಮಾಡಲಾಗುವುದು. ಸಾಮಾನ್ಯ ಪ್ರಜೆಯೊಬ್ಬರು ದೂರು ಕೊಟ್ಟ ಹಿನ್ನೆಲೆ ಪ್ರಾಸಿಕ್ಯೂಷನ್ ಗೆ ಆದೇಶ ಮಾಡಿದ್ದಾರೆ.
ದೂರು ನೀಡಿರುವ ಇಬ್ರಾಹಿಂ ಗೆ ಈ ಹಿಂದೆ ಸುಪ್ರೀಂ ಕೋರ್ಟ್ ದಂಡ ವಿಧಿಸಿದೆ. ಸಿಎಂ ಹಗರಣದಲ್ಲಿ ಭಾಗಿಯಾಗಿದ್ರೆ ಮೊದಲು ತನಿಖಾ ಸಂಸ್ಥೆಗೆ ತನಿಖೆಗೆ ಒಳಪಡಿಸಬೇಕಾಗಿತ್ತು. ಎಸ್ ಐ ಟಿ, ಲೋಕಾಯುಕ್ತ, ಸಿಐಡಿ ಗೆ ಕೊಡಬೇಕಿತ್ತು. ಬಳಿಕ ಆ ವರದಿ ಆಧರಿಸಿ ತಪ್ಪು ಮಾಡಿದ್ದರೆ ಪ್ರಸಿಕ್ಯೂಷನ್ ಗೆ ಕೊಡಬೇಕಿತ್ತು. ಆದ್ರೆ ರಾಜ್ಯಪಾಲರು ಅನುಮತಿ ವಿರುದ್ದ ಕಾನೂನು ಹೋರಾಟ ಮಾಡುತ್ತೇವೆ. ಜನರಲ್ ಅಡ್ವೋಕೇಟ್ ಜನರಲ್, ಹಿರಿಯ ಸರ್ಕಾರಿ ವಕೀಲರು ಮೂಲಕ ಕಾನೂನು ಹೋರಾಟ ಮಾಡಲಾಗುತ್ತೆ ಎಂದರು.
ಇನ್ನೂ ಬಿಜೆಪಿ ಯಿಂದ ಸಿದ್ದರಾಮಯ್ಯ ಅವರ ರಾಜೀನಾಮೆ ಒತ್ತಾಯ ವಿಚಾರವಾಗಿ ಮಾತನಾಡಿ, ರಾಜಿನಾಮೆ ಕೇಳೋದು ಅವರ ಹಕ್ಕು. ಸಿಎಂ ಸಿದ್ದರಾಮಯ್ಯ ಅವರ ೪೦ ವರ್ಷದ ರಾಜಕೀಯ ಅವಧಿಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ. ಇಂದು ಸಹ ಯಾವುದೆ ಕಪ್ಪು ಚುಕ್ಕೆ ಇಲ್ಲ, ಮುಡಾ ಹಗರಣಕ್ಕೂ ಸಿದ್ದರಾಮಯ್ಯ ಅವರಿಗೂ ಸಂಬಂಧವಿಲ್ಲ. ಮೂಡಾ ನಿವೇಶನ ಕೊಟ್ಟಾಗ ಬಿಜೆಪಿಯ ಸರದಜಾರವೆ ಇದ್ದಿದ್ದು. ಬಸರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ನಿವೇಶನ ಕೊಟ್ಟು. ಈಗ ಅವರೆ ಪ್ರತಿಭಟನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲ್ಲ ಅವರು ತಪ್ಪು ಮಾಡಿಲ್ಲ. ಕಾಂಗ್ರೆಸ್ ನಲ್ಲಿ ಸಿಎಂ ವಿರುದ್ದ ಯಾವುದೆ ಪಿತೂರಿ ನಡೆದಿಲ್ಲ ಎಂದರು.