ಬೆಂಗಳೂರು: ತೀವ್ರಗೊಂಡಿರುವ ಪಡಿತರ ಕಾರ್ಡ್ ರದ್ದತಿ ವಿವಾದ ತಗ್ಗಿಸಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಅವರು, ಸರಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿಯನ್ನೂ ರದ್ದು ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇದರ ಬೆನ್ನಲ್ಲೇ ರಾಜ್ಯದಲ್ಲಿ ಯಾವುದೇ ಬಿ ಪಿಎಲ್ ಹಾಗೂ ಎಪಿಎಲ್ ಕಾರ್ಡ್ ಗಳನ್ನ ರದ್ದು ಮಾಡಿಲ್ಲ ಎಂದು ವಿಧಾನಸೌಧದಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಸಾರ್ವಜನಿಕರೇ ಗಮನಿಸಿ.. ನಿಮ್ಮ ಬಳಿ 500 ರೂಪಾಯಿ ನೋಟು ಇದ್ಯಾ..? ಕ್ಷಣಮಾತ್ರದಲ್ಲಿ ನೀವು ಆಗ್ಬೋದು ಮಿಲಿಯನೇರ್!
ಹೌದು ಸಿಎಂ ಆದೇಶದಂತೆ ಸರ್ಕಾರಿ ನೌಕರರು ಹಾಗೂ ತೆರಿಗೆ ಪಾವತಿದಾರರ ಬಿಪಿಎಲ್ ಕಾರ್ಡ್ ಗಳನ್ನ ರದ್ದು ಮಾಡಲಾಗಿದೆ ಅಷ್ಟೇ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಅನರ್ಹರ ಕಾರ್ಡ್ ಪತ್ತೆಗೆ ಅಗತ್ಯ ಕ್ರಮ ಜರುಗಿಸಲಾಗಿದೆ ಎಂದರು.
ಇನ್ನೂ ಬಿಪಿಎಲ್ ಗೆ ಅರ್ಹರಿದ್ದು ಅಂತಹವರನ್ನ ಎಪಿಎಲ್ ಗೆ ಸೇರಿಸಿದ ಕಾರ್ಡ್ ಗಳನ್ನ ಮರು ಸ್ಥಾಪನೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಿಪಿಎಲ್ ಮಾನದಂಡ ಮೀರಿದ ಒಂದು ಲಕ್ಷದ ಐನೂರು ಕಾರ್ಡ್ ಗಳು ಮಾತ್ರ ರದ್ದಾಗಿವೆ. ಬಿಪಿಎಲ್ ಒಂದು ಕೋಟಿ ಹನ್ನೆರಡು ಲಕ್ಷ ಕಾರ್ಡ್ ಗಳು ಚಾಲ್ತಿಯಲ್ಲಿವೆ. ಒಂದು ವಾರದಲ್ಲಿ ಬಿಪಿಎಲ್ ಮಾನ್ಯತೆ ಪಡೆದವರಿಗೆ ಮತ್ತೆ ಹಿಂದಿನಂತೆಯೆ ಸೌಲಭ್ಯ ಸಿಗಲಿದೆ. ಲಾಗಿನ ಪ್ರಕ್ರಿಯೆಯನ್ನ ಮುಗಿಸಿ ಶೀಘ್ರವೇ ಅವರಿಗೂ ಬಿಪಿಎಲ್ ದೊರಕುವಂತೆ ಮಾಡಿಕೊಡುತ್ತೇವೆ ಎಂದರು.
ಸದ್ಯಕ್ಕೆ ಕಾರ್ಡ್ ಪರಿಷ್ಕರಣೆಯನ್ನ ನಿಲ್ಲಿಸಲಾಗಿದೆ. ಎಂದಿನಂತೆ ಅವರಿಗೆ ಸೌಲಭ್ಯ ಸಿಗಲಿದೆ. ಈಗ ಕಾರ್ಡ್ ರದ್ದಾಗಿರುವ ಅರ್ಹ ಬಿಪಿಎಲ್ ಕಾರ್ಡ್ ದಾರರು ಹಳೆಯ ನಂಬರ್ ನಲ್ಲೇ ಹಿಂದಿನಂತೆ ಸೌಲಭ್ಯ ಪಡೆಯಬಹುದಾಗಿದೆ ಎಂದು ಹೇಳಿದರು.