ಮೆಲ್ಬೋರ್ನ್ ಮೈದಾನದಲ್ಲಿ ಟೆಸ್ಟ್ ಶತಕ ಸಿಡಿಸಿದ ಕೆಲವೇ ಕೆಲವು ಬ್ಯಾಟರ್ಗಳ ಪಟ್ಟಿಯಲ್ಲಿ ಇನ್ಮುಂದೆ ನಿತೀಶ್ ಕುಮಾರ್ ರೆಡ್ಡಿ ಹೆಸರು ಕೂಡ ಕಾಣಿಸಿಕೊಳ್ಳಲಿದೆ. ಹೌದು ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ದಾಂಡಿಗ ನಿತೀಶ್ ಕುಮಾರ್ ರೆಡ್ಡಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ 171 ಎಸೆತಗಳಲ್ಲಿ ಚೊಚ್ಚಲ ಶತಕ ಪೂರೈಸಿದರು. ನಿತೀಶ್ ರೆಡ್ಡಿ ಚೊಚ್ಚಲ ಟೆಸ್ಟ್ ಅರ್ಧಶತಕ ಬಾರಿಸುತ್ತಿದ್ದಂತೆಯೇ ಪುಷ್ಪ ಸಿನಿಮಾದ ಸೆಲಿಬ್ರೇಷನ್ ಮಾಡಿ ಗಮನ ಸೆಳೆದಿದ್ದಾರೆ.
https://x.com/StarSportsIndia/status/1872840444520087638?ref_src=twsrc%5Etfw%7Ctwcamp%5Etweetembed%7Ctwterm%5E1872840444520087638%7Ctwgr%5E08f207cfbf192232d57028a0de74c865ac37d94e%7Ctwcon%5Es1_&ref_url=https%3A%2F%2Fwww.etvbharat.com%2Fkn%2Fsports%2Fnitish-kumar-reddy-celebrates-in-pushpa-style-after-scoring-a-half-century-against-australia-karnataka-news-kas24122801175
ಹೌದು ನಿತೀಶ್ ಕುಮಾರ್ ರೆಡ್ಡಿ 81 ಎಸೆತಗಳನ್ನು ಎದುರಿಸಿ ಚೊಚ್ಚಲ ಟೆಸ್ಟ್ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನು ಅರ್ಧಶತಕ ಪೂರೈಸುತ್ತಿದ್ದಂತೆಯೇ ಪುಷ್ಪ ಸೆಲಿಬ್ರೇಷನ್ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೈದರಾಬಾದ್ ಮೂಲದ 21 ವರ್ಷದ ಯುವ ಬ್ಯಾಟರ್, ಆಸೀಸ್ ಎಡಗೈ ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಆಫ್ ಸೈಡ್ನಲ್ಲಿ ಅದ್ಭುತ ಡ್ರೈವ್ ಮೂಲಕ ಬೌಂಡರಿ ಬಾರಿಸಿ ಚೊಚ್ಚಲ ಅರ್ಧಶತಕವನ್ನು ಪೂರೈಸಿದರು.
ನಿತೀಶ್ ರೆಡ್ಡಿ ತಾವಾಡಿದ ಆರನೇ ಟೆಸ್ಟ್ ಇನ್ನಿಂಗ್ಸ್ನಲ್ಲಿ ಇದೇ ಮೊದಲ ಅರ್ಧಶತಕವಾಗಿದೆ. ವಿಶಾಖಪಟ್ಟಣಂ ಮೂಲದ ನಿತೀಶ್ ರೆಡ್ಡಿ, ರಿಷಭ್ ಪಂತ್ ವಿಕೆಟ್ ಪತನದ ಬಳಿಕ ಕ್ರೀಸ್ಗಿಳಿದರು. ನಿತೀಶ್ ರೆಡ್ಡಿ ಕ್ರೀಸ್ಗಿಳಿಯುವಾಗ ಭಾರತ ತಂಡವು ಆರು ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತ್ತು. ಆ ಸಂದರ್ಭದಲ್ಲಿ ಟೀಂ ಇಂಡಿಯಾ ಫಾಲೋ ಆನ್ ಭೀತಿಗೂ ಸಿಲುಕಿತ್ತು.
ಜಡೇಜಾ ವಿಕೆಟ್ ಪತನದ ವೇಳೆಗೆ ಭಾರತ ತಂಡವು ಫಾಲೋ ಆನ್ನಿಂದ ಪಾರಾಗಲು ಇನ್ನೂ 55 ರನ್ಗಳ ಅಗತ್ಯವಿತ್ತು. ಈ ವೇಳೆಗೆ ಎಂಟನೇ ವಿಕೆಟ್ಗೆ ಜತೆಯಾದ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಸಮಯೋಚಿತ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಫಾಲೋ ಆನ್ ಭೀತಿಯಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.