ನವದೆಹಲಿ:– ಮತ್ತೊಮ್ಮೆ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
PAK V/s IND: ಪಾಕ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಮತ್ತೆ ಕೊಹ್ಲಿ ವಿಫಲ…ಭರವಸೆ ಮೂಡಿಸಿ ರೋಹಿತ್ ಔಟ್!
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ಬಿಜೆಪಿ ನಾಯಕಿ ನಿರ್ಮಲಾ ಸೀತಾರಾಮನ್. ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಮಹತ್ವದ ಸಚಿವ ಸ್ಥಾನವನ್ನು ಅಲಂಕರಿಸಿದ ನಾಯಕಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಳಿಕ ಯಾವುದೇ ಸಚಿವೆ ರಕ್ಷಣಾ ಖಾತೆ ನಿರ್ವಹಿಸಿರಲಿಲ್ಲ. ಆದರೆ ನಿರ್ಮಲಾ ಸೀತಾರಾಮನ್ ಆ ದಾಖಲೆಯನ್ನು ಮುರಿದರು. ನಂತರ 2019ರಲ್ಲಿ ಮತ್ತೆ ಮೋದಿ ಸರ್ಕಾರದಲ್ಲಿ ಪ್ರತಿಷ್ಠಿತ ಹಣಕಾಸು ಸಚಿವಾಲಯದ ಜವಾಬ್ದಾರಿ ಹೊತ್ತು ಭಾರತದಂತರ ದೊಡ್ಡ ದೇಶಕ್ಕೆ ಬಜೆಟ್ ಮಂಡಿಸಿದರು. ಈಗ ಮತ್ತೆ ಮೋದಿ ಸಂಪುಟ ಸೇರಿದ್ದಾರೆ.
ಸೀತಾರಾಮನ್ ದೇಶದ ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವರಾಗಿದ್ದಾರೆ. ಈ ಹಿಂದೆ, ಇಂದಿರಾ ಗಾಂಧಿ ಅವರು ಭಾರತದ ಪ್ರಧಾನಿಯಾಗಿದ್ದಾಗ ಅಲ್ಪಾವಧಿಗೆ ಹೆಚ್ಚುವರಿ ಖಾತೆಯಾಗಿ ಹಣಕಾಸು ಹೊಂದಿದ್ದರು. ಸೀತಾರಾಮನ್ ಅವರು 2019ರ ಜುಲೈ 5 ರಂದು ಚೊಚ್ಚಲ ಬಜೆಟ್ ಅನ್ನು ಮಂಡಿಸಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)