ಕಲಬುರಗಿ: ಲೋಕಸಭೆ ಚುನಾವಣೆಗೆ ಕಲಬುರಗಿಯಲ್ಲಿ ಕೈ ಅಭ್ಯರ್ಥಿ ಆಗ್ತಾರಾ ಸಚಿವ ಪ್ರಿಯಾಂಕ್ ಖರ್ಗೆ..? ಇಂತಹದೊಂದು ಗರ್ಮಾಗರಂ ಚರ್ಚೆ AICC ಅಧ್ಯಕ್ಷರ ತವರೂರಲ್ಲಿ ಜೋರಾಗಿ ನಡೀತಿದೆ.. ಎಲ್ಲದಕೂ ಕಾರಣ ಖುದ್ದು ಪ್ರಿಯಾಂಕ್ ಖರ್ಗೆ ಆಡಿದ ಆ ಒಂದು ಮಾತು. ಹೌದು ಈಗಾಗಲೇ ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಆಗಿರೋ ಚರ್ಚೆಯ ಪ್ರಕಾರ ಕೆಲ ಸಚಿವರನ್ನ ಲೋಕದ ಅಖಾಡದಲ್ಲಿ ಇಳಿಸಲು ಚಿಂತನೆ ನಡೆದಿದೆ..
ಇದೇವೇಳೆ ಕಲಬುರಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಹೈಕಮಾಂಡ್ ನಿಲ್ಲು ಅಂದ್ರೆ ನಾನು ಮಾತ್ರವಲ್ಲ ಎಲ್ಲ ಸಚಿವರೂ ಪಾರ್ಲಿಮೆಂಟಿಗೆ ನಿಲ್ಲಲು ತಯಾರು ಅಂತ ಸ್ಪಷ್ಟಪಡಿಸಿದ್ದಾರೆ..ಆದ್ರೆ ಪ್ರಿಯಾಂಕ್ ನಿಲ್ತಾರಾ ಇಲ್ಲ AICC ಅಧ್ಯಕ್ಷ ಖರ್ಗೆಯವರೇ ಮತ್ತೊಮ್ಮೆ ಕಣಕ್ಕಿಳೀತಾರಾ ಸದ್ಯಕ್ಕೆ ಸಸ್ಪೆನ್ಸ್..