ರಾಮನಗರ:- ಕಣ್ಣೀರು ಹಾಕೋದು ನಿಖಿಲ್ ಗೆ ವಂಶಪಾರಂಪರ್ಯದಿಂದ ಬಂದಿದೆ ಎಂದು CP ಯೋಗೇಶ್ವರ್ ಹೇಳಿದ್ದಾರೆ.
ಕುಮಾರಸ್ವಾಮಿಆಡಳಿತದ ಅದ್ವಾನದಿಂದ ಸಾವಿರಾರು ಜನ ಕಣ್ಣೀರು ಹಾಕುತ್ತಿದ್ದಾರೆ. ಅವರ ಕಣ್ಣೀರನ್ನು ಒರೆಸುವವರು ಯಾರು ಎಂದು ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪ್ರಶ್ನಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿಗೂ ಚನ್ನಪಟ್ಟಣಕ್ಕೂ ಏನು ಸಂಬಂಧ ಇಲ್ಲ. ಅವರು ಇಲ್ಲಿ ಕಣ್ಣೀರು ಹಾಕಲು ಕಾರಣವೇ ಇಲ್ಲ. ಕಣ್ಣೀರು ಹಾಕೋದು ಅವರ ವಂಶಪಾರಂಪರ್ಯವಾಗಿ ಬಂದಿದೆ ಎಂದರು
ಯೋಗೇಶ್ವರ್ ಬಿಜೆಪಿಗೆ ಮೋಸ ಮಾಡಿದ್ದಾರೆಂಬ ಬಿಜೆಪಿ ನಾಯಕರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಚುನಾವಣೆಯಲ್ಲಿ ಜನ ನನ್ನನ್ನು ಬೆಂಬಲಿಸುತ್ತಾರೆ. ಚುನಾವಣೆ ಅಂದಮೇಲೆ ಪ್ರಚಾರ-ಅಪಪ್ರಚಾರ ಸಾಮಾನ್ಯ. ನಾನು ಬಿಜೆಪಿಯಲ್ಲಿ ಟಿಕೆಟ್ ಕೇಳಿದ್ದೆ. ಕುಮಾರಸ್ವಾಮಿ ಮಗನನ್ನು ಪ್ರತಿಷ್ಠಾಪನೆ ಮಾಡಬೇಕಿತ್ತು. ಹಾಗಾಗಿ ಕೊನೆಯವರೆಗೂ ಆಟ ಆಡಿಸಿದರು. ವಂಶಪಾರಂಪರ್ಯ, ಕುಟುಂಬ ರಾಜಕಾರಣಕ್ಕೆ ನನಗೆ ಟಿಕೆಟ್ ಕೊಡಲಿಲ್ಲ. ಇದು ಜೆಡಿಎಸ್ನವರಿಗೂ ಸಹ ಗೊತ್ತಿದೆ. ಸ್ಥಳೀಯ ಜೆಡಿಎಸ್ನವರು ಸಹ ನನಗೆ ಟಿಕೆಟ್ ಕೊಡಿ ಎಂದಿದ್ದರು. ಕೊನೆಗೂ ಕುಮಾರಸ್ವಾಮಿ ಅವರ ಪ್ಲ್ಯಾನ್ ಸಕ್ಸಸ್ ಮಾಡಿಕೊಂಡರು ಎಂದು ಕಿಡಿಕಾರಿದರು.