ಬೆಂಗಳೂರು:- ಕಾಂಗ್ರೆಸ್ ನವರಿಂದ ಜೆಡಿಎಸ್ ಬಿಜೆಪಿ ಮೈತ್ರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಹೆಚ್ ಡಿ ರೇವಣ್ಣ ಹೇಳಿದ್ದಾರೆ.
ದೀಪಾವಳಿ ಎಫೆಕ್ಟ್: ಬಸ್ ಪ್ರಯಾಣ ದರ ದುಬಾರಿ- ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ಖಡಕ್ ಸೂಚನೆ!
ಈ ಸಂಬಂಧ ಮಾತನಾಡಿದ ಅವರು,ದೇವೇಗೌಡರ ಕುಟುಂಬ ಎಂದೂ ಹಿಂಬಾಗಿಲಿನಿಂದ ರಾಜಕಾರಣಕ್ಕೆ ಬಂದಿಲ್ಲ. ಅಧಿಕಾರಕ್ಕೆ ಅಂಟಿ ಕೂರುವ ಕುಟುಂಬ ನಮ್ಮದಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಥಳೀಯರನ್ನೇ ನಿಲ್ಲಿಸ್ತೀವಿ ಅಂತಾ ಹೇಳಿದ್ವಿ. ನಾವು ಯೋಗೇಶ್ವರ್ಗೆ ಕೊನೆ ಘಳಿಗೆವರೆಗೂ ಅವಕಾಶ ನೀಡಿದ್ವಿ. ಬಿಜೆಪಿಯಿಂದಲೇ ನಿಂತ್ಕಳಿ ಅಂತಾ ಹೇಳಿದ್ದೆವು. ಆದರೆ ಯೋಗೇಶ್ವರ್ ಕಾಂಗ್ರೆಸ್ ಸೇರಿದ್ರು. ಕಾಂಗ್ರೆಸ್ಗೆ ಕ್ಯಾಂಡಿಡೇಟ್ ಇಲ್ಲದೆ ಗೋಗರೆದು ನಿಲ್ಲಿಸಿದ್ದಾರೆ. ದಮ್ಮಯ್ಯ, ದಕ್ಕಯ್ಯ ಅಂದು ಯೋಗೇಶ್ವರ್ ನಿಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಅಧಿಕಾರಕ್ಕಾಗಿ ಯಾರ ಮುಂದೆ ಬೇಕಾದರೂ ಕೈಕಾಲಾದ್ರು ಕಟ್ಟುತ್ತಾರೆ. ದೇವೇಗೌಡ್ರು ಕುಟುಂಬ ನಾಶ ಮಾಡುವುದೊಂದೇ ಉದ್ದೇಶ. ನಿಖಿಲ್ ನಿಲ್ಲಿಸದಿದ್ರೆ ಕುಮಾರಸ್ವಾಮಿ ಮಗ ಹೆದರಿ ಹೋದ ಅಂತಾ ಹಬ್ಬಿಸುತ್ತಿದ್ರು. ನಿಖಿಲ್ ಪ್ರಾಮಾಣಿಕವಾಗಿ ಓಡಾಡ್ತಾನೆ, ಗೆಲ್ತಾನೆ. ಜೆಡಿಎಸ್ ಮುಗಿದೇ ಹೋಯ್ತು ಅಂದ್ರು, ಕುಮಾರಣ್ಣ ಕೇಂದ್ರ ಸಚಿವರಾಗಿಲ್ವ? ಇವರಾರಿಂದ ಮೈತ್ರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾರೆ.