ರಾಮನಗರ: ಚನ್ನಪಟ್ಟಣದಲ್ಲಿ ನಡೆದ ಜೆಡಿಎಸ್ ಕೃತಜ್ಞತಾ ಸಭೆಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಹಾಡಿಹೊಗಳಿದ್ದಾರೆ. ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು, ಚನ್ನಪಟ್ಟಣ ಸೋಲಿನ ಜವಾಬ್ದಾರಿ ನಾನೇ ಹೊರುತ್ತೇನೆ. ಅದನ್ನು ಜಯಮುತ್ತು, ಮತ್ತು ಕಾರ್ಯಕರ್ತರಿಗೆ ಕೊಡಲ್ಲ ಎಂದರು. ಚನ್ನಪಟ್ಟಣ ಸೋಲಿಗೆ ನನ್ನ ನಿಧಾನಗತಿಯ ತೀರ್ಮಾನಗಳು ಕಾರಣ ಆಗಿವೆ, ಮಂಡ್ಯಕ್ಕೆ ನಿಖಿಲ್ ನಿಲ್ಲಿಸಬೇಕೆಂದು ಸಾ.ರಾ.ಮಹೇಶ್ ಒತ್ತಡ ಹಾಕಿದ್ರು. ಅದರೆ ನಿಖಿಲ್ ರಾಮನಗರ ಜಿಲ್ಲೆಯಿಂದಲೇ ಹೋರಾಟ ಮಾಡಲು ಗಟ್ಟಿ ನಿರ್ಧಾರ ಮಾಡಿದರು. ಹೀಗಾಗಿ ನಾನು ಮಂಡ್ಯದಲ್ಲಿ ಸ್ಪರ್ಧೆ ಮಾಡಿದೆ. ನಿಖಿಲ್ ಅಧಿಕಾರಕ್ಕಾಗಿ ಹೋಗಿದ್ರೆ ಅವರೇ ಮಂಡ್ಯದಿಂದ ನಿಲ್ಲುತ್ತಿದ್ದರು ಎಂದರು. ಯಾವುದೇ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲುವ ಶಕ್ತಿ ಇರೋದು ದೇವೇಗೌಡರ ಕುಟುಂಬಕ್ಕೆ ಮಾತ್ರ ಎಂದರು.
ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಸಮಾವೇಶ ಮಾಡುತ್ತಿರಬಹುದು: ನಿಖಿಲ್ ಕುಮಾರಸ್ವಾಮಿ
ಹಾಸನದಲ್ಲಿ ಸಿದ್ದರಾಮೋತ್ಸವ ಮಾಡಲು ಹೋಗ್ತಿದ್ದಾರೆ. ಯಾಕಪ್ಪ ಸಿದ್ದರಾಮೋತ್ಸವ, ಅಹಿಂದ ಸಮಾವೇಶ ಮಾಡಲು ಹೊರಟ್ಟಿದ್ದೀರಿ. ಏನು ಸಂದೇಶ ಕೊಡ್ತೀರಿ ನೀವು. ದಲಿತರಿಗೆ ಯಾವ ಸಂದೇಶ ಕೊಡ್ತೀರಿ ನೀವು ಎಂದು ಪ್ರಶ್ನಿಸಿದರು.
ನಿಖಿಲ್ ಕುಮಾರಸ್ವಾಮಿ ರಣಹೇಡಿ ಅಲ್ಲ, ರಣಧೀರನಾಗಿ ಈ ಕ್ಷೇತ್ರದಲ್ಲಿ ಹೋರಾಟ ಮಾಡ್ಲಿಕ್ಕೆ ಬಂದಿದ್ದು, ಈ ಕ್ಷೇತ್ರದಲ್ಲಿ ಒಕ್ಕಲಿಗರು ನಮಗೆ ಶಕ್ತಿ ತುಂಬಿದ್ದೀರಿ. ದೇವೇಗೌಡರ ಕುಟುಂಬವನ್ನು ಒಕ್ಕಲಿಗರಿಂದ ತೆಗೆದುಹಾಕಲು ಇನ್ನು 10 ಜನ್ಮ ಹೋದರೂ ಆಗಲ್ಲ, ಇವತ್ತು ದೇವೇಗೌಡರು ಪ್ರಧಾನಿ ಆಗಲು ಒಕ್ಕಲಿಗರು ಕಾರಣ. ನಾವು ಯಾವತ್ತು ಸಹ ಜಾತಿ ರಾಜಕಾರಣ ಮಾಡಿಲ್ಲ. ರಾಮನಗರದಲ್ಲಿ ಕೊಳೆತು ನಾರುತ್ತಿತ್ತು, ಮುಸ್ಲಿಂ ಸಮಾಜಕ್ಕೆ ಏನು ಅನ್ಯಾಯ ಮಾಡಿದ್ದೇವೆ, ಯಾವ ಸತ್ಯ ಮೇವ ಜಯತೇ ಸಿದ್ದರಾಮಯ್ಯರದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.