ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಸರು ಅಂತಿಮವಾಗಿದೆ. ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಎನ್ಡಿಎ ಅಭ್ಯರ್ಥಿ ಎಂದು ಅಧಿಕೃತವಾಗಿ ಯಡಿಯೂರಪ್ಪ ಘೋಷಿಸಿದರು. ಬಳಿಕ ನಿಖಿಲ್ಗೆ ಹೂಗುಚ್ಛ ನೀಡಿ ನೀಡಿದರು. ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳ ಶಾಲನ್ನು ನಿಖಿಲ್ಗೆ ಯಡಿಯೂರಪ್ಪ ಹಾಕಿದರು. ಹೂವಿನ ಹಾರ ಹಾಕಿ ಅಭಿನಂದಿಸಿದರು. ಜೊತೆಗೆ ಎಲ್ಲಾ ನಾಯಕರು ವಿಕ್ಟರಿ ಸಿಂಬಲ್ ತೋರಿಸಿ ಪರಸ್ಪರ ಕೈ ಕುಲುಕಿದರು.
ಈ ವೇಳೆ ಮಾತನಾಡಿದ ಬಿಎಸ್ವೈ, ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಅಂತಾ ಘೋಷಣೆ ಮಾಡಿದ್ದೇವೆ. ಮೋದಿ ಆಶೀರ್ವಾದ ಇದೆ. ನಿಖಿಲ್ ಕುಮಾರಸ್ವಾಮಿ ನೂರಕ್ಕೆ ನೂರು ಗೆಲ್ತಾರೆ. ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಆಯ್ಕೆ ಮಾಡಿದ್ದೇವೆ. ಮೋದಿಯವರ ಆಶೀರ್ವಾದ, ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು.
ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್! 2027 ರೊಳಗೆ ದೇಶದ 11 ಕೋಟಿ ರೈತರಿಗೆ ‘ಡಿಜಿಟಲ್ ಐಡಿ’ ಕಾರ್ಡ್
ನಾವೆಲ್ಲ ಒಟ್ಟಾಗಿ ಸೇರಿದ್ದೇವೆ. ನೂರಕ್ಕೆ ನೂರು ಗೆಲ್ತೇವೆ, ಬಂದು ಭೇಟಿ ಮಾಡ್ತೇವೆ. ಎನ್ಡಿಎ ನಾಯಕರು ಪ್ರವಾಸ ಮಾಡ್ತೀವಿ. ಪಕ್ಷಾಂತರ ಮಾಡಿದವರ ಬಗ್ಗೆ ಮಾತಾಡೊಲ್ಲ. ನಾವು ನಮ್ಮ ಅಭ್ಯರ್ಥಿ ಪರ ಕೆಲಸ ಮಾಡ್ತೀವಿ. ನಾವೆಲ್ಲ ಒಟ್ಟಾಗಿ ಕೆಲಸ ಮಾಡ್ತೀವಿ ಎಂದು ಹೇಳಿದರು. ದೊಡ್ಡ ಅಂತರದಲ್ಲಿ ನಿಖಿಲ್ ಗೆಲ್ತಾರೆ. ಯೋಗೇಶ್ವರ್ ಬಗ್ಗೆ ನಾನು ಮಾತಾಡೊಲ್ಲ. ನಿಖಿಲ್ಗೆ ನಾವು ಬೆಂಬಲ ಕೊಡ್ತೀವಿ ಎಂದು ತಿಳಿಸಿದರು.