ಮಾರುಕಟ್ಟೆಗೆ ಜನರನ್ನು ಕರೆದುಕೊಂಡು ಹೋಗುತ್ತಿದ್ದ ದೋಣಿ ಮುಳುಗಿ ಕನಿಷ್ಠ 27 ಜನ ಜಲಸಮಾಧಿಯಾಗಿದ್ದು 100ಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವ ಘಟನೆ ಉತ್ತರ ನೈಜೀರಿಯಾದ ನಿಗರ್ ನದಿಯಲ್ಲಿ ಸಂಭವಿಸಿದೆ.
ಕೋರಿ ರಾಜ್ಯದಿಂದ ಪಕ್ಕದ ನಿಗರ್ ರಾಜ್ಯಕ್ಕೆ ತೆರಳುತ್ತಿದ್ದ ದೋಣಿಯಲ್ಲಿ ಕನಿಷ್ಠ 200 ಮಂದಿ ಪ್ರಯಾಣಿಕರಿದ್ದರು. ಇವರಲ್ಲಿ ಬಹುತೇಕರು ಮಹಿಳೆಯರೇ ಇದ್ದರು ಎಂದು ನಿಗರ್ ರಾಜ್ಯದ ತುರ್ತು ನಿರ್ವಹಣಾ ಏಜೆನ್ಸಿ ವಕ್ತಾರ ಇಬ್ರಾಹಿಂ ಔದು ಹೇಳಿದ್ದಾರೆ.
ಮುಳುಗು ತಜ್ಞರು 27 ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಕೋರಿ ರಾಜ್ಯ ತುರ್ತು ಸೇವೆಗಳ ವಕ್ತಾರ ಸಾಂಡ್ರಾ ಮೂಸಾ ಸ್ಪಷ್ಟಪಡಿಸಿದ್ದಾರೆ. ಘಟನೆ ನಡೆದ 12 ಗಂಟೆ ಬಳಿಕವೂ ಯಾರೂ ಬದುಕಿ ಉಳಿದಿರುವುದು ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.