ಬೀದರ್:- ಮುಂದಿನ ಸಲ ಯತ್ನಾಳ್ ಸೋಲದಿದ್ರೆ ಮಠ ತ್ಯಾಗ ಮಾಡುತ್ತೇನೆ ಎಂದು ಹುಲಸೂರು ಶ್ರೀ ಸವಾಲ್ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಹೊತ್ತಿ ಉರಿದ ಟ್ರಾನ್ಸ್ ಫಾರ್ಮರ್! ಕೂದಲೆಳೆಯಲ್ಲಿ ತಪ್ಪಿದ ಅನಾಹುತ!
ಈ ಸಂಬಂಧ ಮಾತನಾಡಿದ ಅವರು, ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ವಾಪಸ್ ಪಡೆಯದೇ ಇದ್ರೆ ಮುಂದಿನ ಸಲ ಬಸನಗೌಡ ಪಾಟೀಲ್ ಯತ್ನಾಳ್ಗೆ ಸೋಲು ಖಚಿತ, ಒಂದು ವೇಳೆ ಅವರು ಸೋಲದೆ ಇದ್ರೆ ನಾನು ನನ್ನ ಮಠ ತ್ಯಾಗ ಮಾಡುತ್ತೇನೆ ಎಂದರು.
ಯತ್ನಾಳ್ಗೆ ಮಾನ ಮರ್ಯಾದೆ ಇದ್ರೆ ಲಿಂಗಾಯತರಲ್ಲಿ ಕ್ಷೆಮೆ ಕೇಳಬೇಕು. ಇಲ್ಲಾವಾದ್ರೆ ರಾಜ್ಯದ ಲಿಂಗಾಯತರು ಇಲ್ಲಿಂದ ಯತ್ನಾಳ್ರನ್ನು ಓಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಕಿಡಿ ಕಾರಿದ್ದಾರೆ.
ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡೋರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಹೆಸರು ಮಾತ್ರ ಬಸವರಾಜ ಆದ್ರೆ ನೀನು ಬೆಂಕಿ ಹಚ್ಚುವ ಬಸವರಾಜ. ಬಸವಣ್ಣನವರು ಸೇರಿದಂತೆ ಎಲ್ಲರ ಬಗ್ಗೆ ಹಗುರವಾಗಿ ಮತಾನಾಡುತ್ತಿದ್ದು, ಯತ್ನಾಳ್ ತಾನೊಬ್ಬನೇ ತೀಸ್ಮರ್ಕಾ ಎಂದು ತಿಳಿದುಕೊಂಡಿದ್ದಾನೆ ಎಂದು ಲೇವಡಿ ಮಾಡಿದ್ದಾರೆ.