ಕಲಬುರಗಿ: ಮುಂದಿನ ಸಿಎಂ ಯಾರಪ್ಪ ಡಿಕೆ ಶಿವಕುಮಾರ್ ನೋಡಪ್ಪ. ಇಂತಹದೊಂದು ಸ್ಲೋಗನ್ ಇವತ್ತು ಖುದ್ದು ಡಿಕೆ ಶಿವಕುಮಾರ್ ಎದುರಲ್ಲೇ ಮೊಳಗಿತು.
ಹೌದು ಕಲಬುರಗಿ ವಿಮಾನ ನಿಲ್ದಾಣಕ್ಕೆ ಇವತ್ತು ಡಿಕೆಶಿ ಬಂದಿಳಿದಾಗ ಅಲ್ಲಿ ಕಾರ್ಯಕರ್ತರ ದಂಡೇ ನೆರೆದಿತ್ತು.. ಯಾವಾಗ ಡಿಕೆಶಿ ಸ್ವಾಗತ ಶುರುವಾಯ್ತೋ ಅಲ್ಲಿಗೆ ನೆಕ್ಸ್ಟ್ ಸಿಎಂ ಡಿಕೆ ಶಿವಕುಮಾರ್ ಅಂತ ಜೈಕಾರ ಮೊಳಗಿತು.
ಇದೇ ಮಾತು ಕಿವಿಗೆ ಬೀಳ್ತಿದ್ದಂತೆ ಖುಷ್ ಆದ ಡಿಕೆಶಿ ಕಾರ್ಯಕರ್ತರ ಕಡೆ ಕೈ ಬೀಸುತ್ತಾ ನಸುನಕ್ಕು ಮುನ್ನಡೆದರು…