ಸತತ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ ಆಫ್ ಗೆ ಅರ್ಹತೆ ಪಡೆಯಲು ಮುಂದಿನ 7 ಪಂದ್ಯಗಳಲ್ಲೂ ಜಯ ಸಾಧಿಸಬೇಕು. ಹೀಗಾಗಿಯೇ ಆರ್ಸಿಬಿ ಪಾಲಿಗೆ ಮುಂದಿನ ಪಂದ್ಯಗಳು ಸೆಮಿಫೈನಲ್ ಕೋಚ್ ಆ್ಯಂಡಿ ಫ್ಲವರ್ ಹೇಳಿದ್ದಾರೆ.
ಆರ್ಸಿಬಿ ತಂಡವು ಮುಂದಿನ 7 ಪಂದ್ಯಗಳನ್ನು ಸೆಮಿಫೈನಲ್ ಎಂದು ಭಾವಿಸಿ ಆಡಬೇಕಿದೆ. ಅಂದರೆ ಇದು ನಾಕೌಟ್ ಹಂತ ಎಂದು ಭಾವಿಸಿಯೇ ಆರ್ಸಿಬಿ ಕಣಕ್ಕಿಳಿಯಬೇಕು. ಈ ಮೂಲಕ ಕಂಬ್ಯಾಕ್ ಮಾಡಲು ಪ್ರಯತ್ನಿಸಬೇಕಿದೆ ಎಂದು ಫ್ಲವರ್ ಹೇಳಿದ್ದಾರೆ.
2 ವಾರ ನಿತ್ಯ ಮೆಂತ್ಯ ಬೀಜ ತಿನ್ನುತ್ತಾ ಬನ್ನಿ, ನಿಮ್ಮ ದೇಹದಲ್ಲಾಗುವ ಚಮತ್ಕಾರ ನೋಡಿ!
ಆರ್ಸಿಬಿ ತಂಡವು ಮುಂದಿನ ಏಳು ಮ್ಯಾಚ್ಗಳನ್ನು ಗೆದ್ದುಕೊಂಡರೆ ಒಟ್ಟು 14 ಅಂಕಗಳನ್ನು ಪಡೆದುಕೊಳ್ಳಲಿದೆ. ಈಗಾಗಲೇ 2 ಪಾಯಿಂಟ್ಸ್ ಹೊಂದಿರುವ ಆರ್ಸಿಬಿ 16 ಅಂಕಗಳನ್ನು ಗಳಿಸಿದರೆ ನೇರವಾಗಿ ಪ್ಲೇಆಫ್ಗೆ ಪ್ರವೇಶಿಸುವ ಅವಕಾಶ ದೊರೆಯಲಿದೆ. ಒಂದು ವೇಳೆ ಮುಂದಿನ 7 ಪಂದ್ಯಗಳಲ್ಲಿ ಒಂದು ಮ್ಯಾಚ್ ಸೋತರೂ ಪ್ಲೇಆಫ್ ಪ್ರವೇಶಿಸಲು ನೆಟ್ ರನ್ ರೇಟ್ ಅಥವಾ ಉಳಿದ ತಂಡಗಳ ಫಲಿತಾಂಶವನ್ನು ಎದುರು ನೋಡಬೇಕಾಗಿ ಬರಬಹುದು.
ಹೀಗಾಗಿಯೇ ಆ್ಯಂಡಿ ಫ್ಲವರ್, ಆರ್ಸಿಬಿ ಪಾಲಿಗೆ ಮುಂಬರುವ ಪಂದ್ಯಗಳು ನಾಕೌಟ್ ಮ್ಯಾಚ್ ಎಂದು ಅಭಿಪ್ರಾಯಪಟ್ಟಿದ್ದಾರೆ. ಅದರಂತೆ ಈ ಏಳು ಪಂದ್ಯಗಳಲ್ಲಿ ಆರ್ಸಿಬಿ ವಿಶೇಷ ರಣತಂತ್ರಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಅಂದರೆ ಗೆಲುವಿನೊಂದಿಗೆ ಆರ್ಸಿಬಿ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಲು ಹೆಚ್ಚಿನ ಮಹತ್ವ ನೀಡಲಿದೆ