ಬೆಂಗಳೂರು: 5 ವರ್ಷಗಳ ಹಿಂದೆ ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿದ್ದ ನವಜಾತ ಶಿಶು ಕಿಡ್ನಾಪ್ ಪ್ರಕರಣದಲ್ಲಿ ಆರೋಪಿತೆಗೆ ಶಿಕ್ಷೆ ಪ್ರಕಟವಾಗಿದೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ನವಜಾತ ಶಿಶು ಕಿಡ್ನಾಪ್ ಪ್ರಕರಣ ಸೆನ್ಸೇಷನಲ್ ಕೇಸ್ ಆಗಿತ್ತು. ಸದ್ಯ ಈ ಪ್ರಕರಣದಲ್ಲಿ ಅಪರಾಧಿ ರಶ್ಮಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 1 ಲಕ್ಷ ದಂಡ ವಿಧಿಸಿ ಸಿಸಿಎಚ್ 51ರ ನ್ಯಾಯಾಧೀಶರಿಂದ ಶಿಕ್ಷೆ ಪ್ರಕಟವಾಗಿದೆ.
2020ರಲ್ಲಿ ವಾಣಿವಿಲಾಸ ಆಸ್ಪತ್ರೆಯಿಂದ ನವಜಾತ ಶಿಶು ಕಳ್ಳತನವಾಗಿತ್ತು. ಈ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ತದನಂತರ ಪ್ರಕರಣದ ತನಿಖೆ ಬಸವನಗುಡಿ ಮಹಿಳಾ ಠಾಣೆಗೆ ವರ್ಗಾವಣೆಯಾಗಿತ್ತು. ಸತತ ಪ್ರಯತ್ನದ ಬಳಿಕ 1 ವರ್ಷದ ಬಳಿಕ ಆರೋಪಿಯನ್ನ ತನಿಖಾಧಿಕಾರಿ ಇನ್ಸ್ಪೆಕ್ಟರ್ ಮೀನಾಕ್ಷಿ ,
EPFO ಖಾತೆದಾರರಿಗೆ ಸಿಹಿ ಸುದ್ದಿ: ಇನ್ಮುಂದೆ UPI ಮೂಲವೇ PF ಹಣ ವಿತ್ ಡ್ರಾ ಮಾಡಬಹುದು..! ಹೇಗೆ ಗೊತ್ತಾ..?
ಪಿಎಸ್ ಐ ಶ್ರೀನಿವಾಸ್ ತನಿಖಾ ಸಹಾಯಕ ಹನುಮಂತ ಜಂಬಗಿ ಮತ್ತು ತಂಡ ಪತ್ತೆ ಮಾಡಿದ್ರು. ತದನಂತರ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು.ಇದೀಗ ಪ್ರಕರಣದ ವಿಚಾರಣೆ ಮುಗಿದು ಆರೋಪಿ ರಶ್ಮಿಗೆ ಶಿಕ್ಷೆ ಪ್ರಕಟವಾಗಿದೆ. ಸರ್ಕಾರದ ಪರವಾಗಿ ಪಿಪಿ ಬಿಎಚ್ ಭಾಸ್ಕರ್ ವಾದ ಮಂಡಿಸಿದ್ರು.