ತುಮಕೂರು:- ತುಮಕೂರಿನ ಶಿರಾದಲ್ಲಿ ಅಮಾನವೀಯ ಘಟನೆ ಒಂದು ಜರುಗಿದೆ. ನವಜಾತ ಹೆಣ್ಣು ಶಿಶುವನ್ನ ಬೇಲಿಯಲ್ಲಿ ಬಿಸಾಕಿ ದುಷ್ಟರು ಹೋಗಿದ್ದಾರೆ.
ಕುರಿಗಾಯಿಗಳ ಸಮಯಪ್ರಜ್ಞೆಯಿಂದ ನವಜಾತ ಹೆಣ್ಣು ಶಿಶುವನ್ನು ರಕ್ಷಣೆ ಮಾಡಲಾಗಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿಯ ಮಾಟನಹಳ್ಳಿ ಗ್ರಾಮದಲ್ಲಿ ಘಟನೆ ಜರುಗಿದೆ. ಯಾರೋ ದುಷ್ಟರು ನವಜಾತ ಹೆಣ್ಣುಮಗುವನ್ನ ಬೇಲಿಯ ಬಳಿ ಬಿಸಾಡಿ ಎಸ್ಕೇಪ್ ಆಗಿದ್ದು, ಬೇಲಿಯ ಬಳಿ ಅಳುತ್ತಿದ್ದ ನವಜಾತ ಶಿಶುವನ್ನು ಕುರಿಗಾಹಿಗಳು ನೋಡಿ ರಕ್ಷಣೆ ಮಾಡಿದ್ದಾರೆ.
ಸಮಯಪ್ರಜ್ಞೆಯಿಂದ ನವಜಾತ ಶಿಶುವನ್ನ ಕುರಿಗಾಯಿಗಳು ರಕ್ಷಿಸಿ, ಕೂಡಲೇ ಕಳ್ಳಂಬೆಳ್ಳ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖೆಗೆ ಮಗುವನ್ನ ಸ್ಥಳೀಯರು ಒಪ್ಪಿಸಿದ್ದಾರೆ.