ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮೇಲಿಂದ ಮೇಲೆ ಹೊಡೆತಗಳು ಬೀಳುತ್ತಿವೆ. ಅವರ ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನು ನಾಶಪಡಿಸಿದ ಸಿವಿಲ್ ಪ್ರಕರಣದಲ್ಲಿ ಯುಎಸ್ ಎ ಮಾಜಿ ಅಧ್ಯಕ್ಷರು ಮತ್ತೊಂದು ಕಾನೂನು ಹಿನ್ನಡೆ ಅನುಭವಿಸಿದ್ದಾರೆ.
ಟ್ರಂಪ್ತಮ್ಮ ಆಸ್ತಿ ಮೌಲ್ಯವನ್ನು ಕೃತ್ರಿಮವಾಗಿ ಹೆಚ್ಚಿಸಿದ್ದಕ್ಕಾಗಿ 3 ಸಾವಿರ ಕೋಟಿ ರೂ ದಂಡವನ್ನು ಪಾವತಿಸಬೇಕು ಎಂದು ನ್ಯೂಯಾರ್ಕ್ ಕೋರ್ಟ್ ತೀರ್ಪು ಪ್ರಕಟಿಸಿದೆ.
ಮೂರು ತಿಂಗಳ ವಿವಾದಾಸ್ಪದ ವಿಚಾರಣೆಯ ನಂತರ, ನ್ಯಾಯಮೂರ್ತಿ ಆರ್ಥರ್ ಎಂಗೊರಾನ್ ತಮ್ಮ ತೀರ್ಪನ್ನು ಪ್ರಕಟಿಸಿದರು. ಈ ವರ್ಷ ಅಧ್ಯಕ್ಷ ಸ್ಥಾನವನ್ನು ಮರಳಿ ಪಡೆಯಲು ಹವಣಿಸುತ್ತಿರುವ ಟ್ರಂಪ್, ಮೂರು ವರ್ಷಗಳ ಕಾಲ ಯಾವುದೇ ನ್ಯೂಯಾರ್ಕ್ ಕಾರ್ಪೊರೇಷನ್ ಅಧಿಕಾರಿ ಅಥವಾ ನಿರ್ದೇಶಕರಾಗಿ ಸೇವೆ ಸಲ್ಲಿಸುವುದನ್ನು ಸಹ ನಿಷೇಧಿಸಲಾಗಿದೆ. ಈ ಬೆಳವಣಿಗೆಗಳ ಮಧ್ಯೆ, ಟ್ರಂಪ್ ಅವರ ವಕೀಲರಾದ ಅಲೀನಾ ಹಬ್ಬಾ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.
ನ್ಯಾಯಾಲಯವು ಈ ಹಿಂದೆ ಸೆಪ್ಟೆಂಬರ್ನಲ್ಲಿ ತಾನು ನೀಡಿದ್ದ ತೀರ್ಪನ್ನು ರದ್ದುಗೊಳಿಸುತ್ತಾ ಟ್ರಂಪ್ರ ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನು ನಿಯಂತ್ರಿಸುವ ಆಧಾರ ಕಂಪನಿಗಳನ್ನು ಮುಚ್ಚುವಂತೆ ಆದೇಶಿಸಿದೆ. ಡೊನಾಲ್ಡ್ ಟ್ರಂಪ್ ಅವರ ವ್ಯವಹಾರಗಳ ಮೇಲ್ವಿಚಾರಣೆ ಮಾಡಲು ಸ್ವತಂತ್ರ ಮಾನಿಟರ್ ಮತ್ತು ವಿಶೇಷ ನಿರ್ದೇಶಕರನ್ನು ನೇಮಿಸುತ್ತಿರುವುದರಿಂದ ಇನ್ನು ಮುಂದೆ ಈ ಕಂಪನಿಗಳ ಅಗತ್ಯವಿಲ್ಲ ಎಂದು ಶುಕ್ರವಾರ ತಿಳಿಸಿದೆ. ಪ್ರಕರಣದಲ್ಲಿ ಟ್ರಂಪ್ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಅಸಮರ್ಥರಾಗಿದ್ದಾರೆ ಎಂದು ಪ್ರತಿವಾದಿಗಳು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ.. ‘ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ಮಾತನಾಡಬೇಡ’ ಎಂದೂ ಟ್ರಂಪ್ ರನ್ನು ಉದ್ದೇಶಿಸಿ ಹೇಳಿದ್ದಾರೆ.