ಚಿಕ್ಕಬಳ್ಳಾಪುರ:- 2025ರ ಹೊಸವರ್ಷಕ್ಕೆ ಭರ್ಜರಿ ಸ್ವಾಗತ ಸಿಕ್ಕಿದೆ. ನ್ಯೂ ಇಯರ್ ಸೆಲೆಬ್ರೇಷನ್ಗೆ ಸಾಕಷ್ಟು ಮಂದಿ ಪ್ರವಾಸಿತಾಣಗಳಿಗೆ ಹೋಗಿದ್ದಾರೆ.
ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಮಧ್ಯರಾತ್ರಿಯಿಂದ ಸಂಭ್ರಮ, ಸಡಗರ ಜೋರಾಗಿತ್ತು.
ಈ ಮೂಲಕ ಹೊಸ ವರ್ಷ 2025ಕ್ಕೆ ಭರ್ಜರಿ ಸ್ವಾಗತ ಸಿಕ್ಕಂತಾಗಿದೆ. ಇನ್ನೂ ನ್ಯೂ ಇಯರ್ ಸಂಭ್ರಮಾಚರಣೆಗಾಗಿ ಪ್ರವಾಸಿಗರ ಹಾಟ್ಸ್ಪಾಟ್ ಚಿಕ್ಕಳ್ಳಾಪುರದ ನಂದಿಬೆಟ್ಟ ಪ್ರವೇಶಕ್ಕೆ ನಂದಿಗಿರಿಧಾಮಕ್ಕೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.
ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿ ಬೆಟ್ಟಕ್ಕೆ ದಂಡು ದಂಡಾಗಿ ಪ್ರವಾಸಿಗರು ಆಗಮಿಸಿದರು. ಪರಿಣಾಮ ನಂದಿ ಬೆಟ್ಟದ ಕ್ರಾಸ್ನಲ್ಲೇ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು.
ಕಾರು ಹಾಗೂ ಬೈಕ್ಗಳಲ್ಲಿ ನಂದಿ ಬೆಟ್ಟಕ್ಕೆ ಪ್ರವಾಸಿಗರು ಲಗ್ಗೆ ಇಟ್ಟರು. ಬೆಳಗ್ಗೆ 7 ಗಂಟೆಗೆ ಚೆಕ್ಪೋಸ್ಟ್ ತೆರೆದಿದ್ದೇ ತಡ ನಾ ಮುಂದು ತಾ ಮುಂದು ಅಂತ ಆಗಮಿಸಿದರು.