ಬೆಂಗಳೂರು:- ಕೋರಮಂಗಲದ ಸ್ಟ್ರೀಟ್ನಲ್ಲಿ ಹೊಸವರ್ಷ ಹಿನ್ನೆಲೆ ಸಂಭ್ರಮಾಚರಣೆ ಜೋಶ್ನಲ್ಲಿ ಯುವಕನೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ.
ಹೂವು ಬೆಳೆದು ಹಣ ಗಳಿಸಿ: ಒಂದು ಎಕರೆಯಲ್ಲಿ ಮಲ್ಲಿಗೆ ಬೆಳೆದರೆ 3 ಲಕ್ಷ ರೂ. ಆದಾಯ!
ಯುವಕನ ವರ್ತನೆಯಿಂದ ರೊಚ್ಚಿಗೆದ್ದ ಮಹಿಳೆ ಕಪಾಳಕ್ಕೆ ಬಾರಿಸಿದ್ದಾರೆ, ಅಲ್ಲದೇ ಯುವಕನನ್ನ ಹಿಡಿದು ದಬ್ಬಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಯುವಕ ಜಾಗ ಖಾಲಿ ಮಾಡಿದ್ದಾನೆ.
ಬೆಂಗಳೂರಿನಲ್ಲೂ ಯುವಕ, ಯುವತಿಯರು ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿದರು. ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿದರು. ಹೊಸ ವರ್ಷದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಕೇಂದ್ರಗಳಾದ ಬೆಂಗಳೂರಿನ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಇಂದಿರಾ ನಗರ, ಕೋರಮಂಗಲ ವರ್ಣರಂಜಿತವಾಗಿ ಮಿರಿ ಮಿರಿ ಮಿಂಚುತ್ತಿದ್ದವು.