ಹುಬ್ಬಳ್ಳಿ: ಈ ದೇಶದ ಸಂಪತ್ತು ಮುಸ್ಲಿಮರಿಗೂ ಸೇರಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯಾ ನವರ ಹೇಳಿಕೆ ವಿಚಾರ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಹ ಸಮರ್ಥನೆ ಮಾಡಿಕೊಂಡಿದ್ದಾರೆ ನಗರದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು
ಸಿದ್ದರಾಮಯ್ಯ ಅವರು ಯಾವ ಸಮಾಸವೇಶದಲ್ಲಿ ಹೇಳಿದ್ದಾರೆ ಅನ್ನೋದು ಮುಖ್ಯ ಮುಸ್ಲಿಂ ಸಮಾವೇಶದಲ್ಲಿ ಮುಸ್ಲಿಮರಿಗೆ ಏನು ಮಾಡುತ್ತೇವೆ ಅನ್ನೋದು ಹೇಳಬೇಕಾಗುತ್ತದೆ ಬೇರೆ ಸಮಾವೇಶದಲ್ಲಿ ಬೇರೆಯವರಿಗೆ ಏನು ಮಾಡುತ್ತೇವೆ ಅಂತ ಹೇಳುತ್ತಾರೆ, ಆದರೆ ಇದರಲ್ಲಿ ತಪ್ಪು ಹುಡುಕೋ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಚೀನಾದಲ್ಲಿ ಹೊಸ ವೈರಸ್ ಪತ್ತೆ ವಿಚಾರ ಕುರಿತು ಮಾತನಾಡಿದ ಅವರು ಇದರ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ
ವಿಶ್ವ ಆರೋಗ್ಯ ಸಂಸ್ಥೆಯಾಗಲಿ ಯಾವುದೇ ಸಂಸ್ಥೆಯಾಗಲಿ ಎಚ್ಚರಿಕೆಗಳನ್ನು ನೀಡಿಲ್ಲ
ಜಿಲ್ಲಾ ಆಸ್ಪತ್ರೆಗಳಲ್ಲಿ ಮೆಡಿಸಿನ್ ಕೊರತೆ ಸಹ ಇದ್ದುಬೇರೆ ಬೇರೆ ಕಾರಣಗಳಿಂದ ಔಷಧ ಕೊರತೆಯಾಗ್ತಿದೆ
ಈ ಸಮಸ್ಯೆ ಸರಿಪಡಿಸಲು ಯತ್ನಿಸುತ್ತೇನೆ ಎಂದು ಅವರು ಭರವಸೆ ನೀಡಿದರು