ಬೆಂಗಳೂರು/ಕಲಬುರ್ಗಿ:- ಪ್ರಯಾಣಿಕರಿಗೆ ಗುಡ್ನ್ಯೂಸ್ ಸಿಕ್ಕಿದ್ದು, ಬೆಂಗಳೂರು-ಕಲುಬುರಗಿ ನಡುವೆ ಹೊಸ ರೈಲು ಆರಂಭವಾಗಿದೆ. ರೈಲ್ವೆಯು SMVT ಬೆಂಗಳೂರು-ಕಲಬುರಗಿ-SMVT ಬೆಂಗಳೂರು ಸಾಪ್ತಾಹಿಕ ರೈಲು ಶನಿವಾರ ಬೆಳಗ್ಗೆ ಕಲಬುರಗಿಗೆ ಆಗಮಿಸಿ ಅದೇ ಸಂಜೆ ಬೆಂಗಳೂರಿಗೆ ಹೊರಟಿತು.
IPL 2024: ಮುಂದಿನ 2 ಪಂದ್ಯಗಳಿಗೆ ಶಿಖರ್ ಧವನ್ ಅಲಭ್ಯ..! – ಕಾರಣ ಇಲ್ಲಿದೆ
ಮಾರ್ಚ್ 9 ರಂದು ರೈಲ್ವೆ ಮಾಡಿದ ಪ್ರಕಟಣೆಯ ಪ್ರಕಾರ, ರೈಲು ಏಪ್ರಿಲ್ 5 ರಿಂದ ಓಡಬೇಕಿತ್ತು. ಬೆಂಗಳೂರು-ಕಲಬುರಗಿ ನಡುವೆ ದಿನ 10 ಸಾವಿರ ಜನ ಓಡಾಡುತ್ತಾರೆ. ಈ ಹೊಸ ರೈಲಿನಿಂದ ಜನ ಆರಾಮಾಗಿ ಪ್ರಯಾಣಿಸಬಹುದು. ಕಲಬುರಗಿ ಮತ್ತು ಬೆಂಗಳೂರು ನಡುವೆ ದಿನ 4 ರೈಲುಗಳು ಓಡಾಟ ನಡೆಸುತ್ತಿವೆ. ವಿಜಯಪುರ, ಮುಂಬೈ ಪ್ರಯಾಣಿಕರಿಗೆ ಸಹಾಯವಾಗ್ತಿದೆ. ಇನ್ನು ಈ ಹೊಸ ರೈಲು ಹಲವು ಪ್ರಯಾಣಿಕರಿಗೆ ಸಹಾಯವಾಗಲಿದೆ. ಜನ ಸಹ ಈ ರೈಲಿನಿಂದ ಖುಷಿಯಾಗಿದ್ದಾರೆ. ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಲಿದೆ.