ಹೊಸ ಟೊಯೋಟಾ ಟೈಸರ್ ಕಾಂಪ್ಯಾಕ್ಟ್ ಎಸ್ಯುವಿಯ ಲಿಮಿಟೆಡ್ ಎಡಿಷನ್, ಪೂರಕ ಅಕ್ಸೆಸೊರಿಗಳ ಪ್ಯಾಕೇಜ್ ಅನ್ನು ಹೊಂದಿದ್ದು, ಇದು ಹೊರಗೆ ಮತ್ತು ಒಳಗೆ ಕಾಸ್ಮೆಟಿಕ್ ಬದಲಾವಣೆಗಳನ್ನು ಕೂಡ ಪಡೆದಿದೆ. ಈ ತಿಂಗಳ 31 ರವರೆಗೆ ಮಾತ್ರ ಇದು ಖರೀದಿಗೆ ಲಭ್ಯವಿರುತ್ತದೆ. ಅಷ್ಟರೊಳಗೆ ಬುಕಿಂಗ್ಗಳನ್ನು ಆಧರಿಸಿ ಹೊಸ ಲಿಮಿಟೆಡ್ ಎಡಿಷನ್ ಡೆಲಿವರಿಗಳು ಇರಲಿವೆ.
ಬೆಲೆಯೆಷ್ಟು?: ಹೊಸ ಟೊಯೋಟಾ ಟೈಸರ್ ಲಿಮಿಟೆಡ್ ಎಡಿಷನ್ ಮಾದರಿಯ ಬೆಲೆ ಶ್ರೇಣಿಯು ಎಕ್ಸ್ ಶೋರೂಂ ದರದಂತೆ ರೂ.10.56 ಲಕ್ಷದಿಂದ 12.88 ಲಕ್ಷ ರೂ. ಇದೆ. ಇದಕ್ಕೆ ಅಕ್ಸೆಸೊರಿಗಳ ಪ್ಯಾಕ್ ಅನ್ನು ಕಾಂಪ್ಲಿಮೆಂಟರಿಯಾಗಿ ನೀಡಲಾಗುವುದು. ಕಂಪನಿಯ ಪ್ರಕಾರ 20,160 ರೂ. ಮೌಲ್ಯದ ಟೊಯೊಟಾ ನೈಜ ಬಿಡಿಭಾಗಗಳನ್ನು (ಟಿಜಿಎ) ನೀಡಲಾಗುತ್ತದೆ.
ಈ ಎಲ್ಲಾ ಕಾಂಪ್ಲಿಮೆಂಟರಿ ಪ್ಯಾಕ್ ಅನ್ನು ಲಿಮಿಟೆಡ್ ಎಡಿಷನ್ನಲ್ಲಿ ಉಚಿತವಾಗಿ ಪಡೆಯಬಹುದು. ಇದರಲ್ಲಿ ಹೆಡ್ ಲ್ಯಾಂಪ್ಗಳ ಸುತ್ತಲೂ ಕ್ರೋಮ್, ಮುಂಭಾಗದ ಗ್ರಿಲ್ ಮತ್ತು ಸೈಡ್ ಮೌಲ್ಡಿಂಗ್, ಗ್ರಾನೈಟ್ ಗ್ರೇ ಮತ್ತು ರೆಡ್ ಬಣ್ಣಗಳಲ್ಲಿ ಮುಂಭಾಗ ಮತ್ತು ಹಿಂಭಾಗದ ಸ್ಪಾಯ್ಲರ್ಗಳು, ಡೋರ್ ಸಿಲ್ ಗಾರ್ಡ್ಗಳನ್ನು ಒಳಗೊಂಡಿದೆ.
ಕ್ಯಾಬಿನ್ ಒಳಗೆ, ಲಿಮಿಟೆಡ್ ಎಡಿಷನ್ ಡೋರ್ ವೈಸರ್ಗಳು, ಆಲ್ ಕ್ಲೈಮೆಟ್ 3 ಡಿ ಮ್ಯಾಟ್ಗಳು ಮತ್ತು ಡೋರ್ ಲ್ಯಾಂಪ್ಗಳನ್ನು ಹೊಂದಿದೆ. ಟೈಸರ್ ಲಿಮಿಟೆಡ್ ಎಡಿಷನ್, ಇತ್ತೀಚೆಗೆ ಬಿಡುಗಡೆಯಾದ ಟೊಯೋಟಾ ಹೈರೈಡರ್ ಫೆಸ್ಟಿವಲ್ ಎಡಿಷನ್ನಂತೆ, ಹಬ್ಬದ ಸೀಸನ್ನಲ್ಲಿ ಟೊಯೊಟಾದ ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಎಂಜಿನ್: ಹೊಸ ಲಿಮಿಟೆಡ್ ಎಡಿಷನ್ ಟೈಸರ್ ಎಸ್ಯುವಿ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ನೊಂದಿಗೆ ಮಾತ್ರ ಲಭ್ಯವಿದೆ. ಇದು 100 ಪಿಎಸ್ ಪವರ್ ಮತ್ತು 148 ಎನ್ಎಮ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ ನೀಡಲಾಗುವುದು ಎಂದು ಕಂಪನಿ ಹೇಳಿದೆ.
ಮೈಲೇಜ್: ಕಂಪನಿಯ ಪ್ರಕಾರ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ನ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಆವೃತ್ತಿಯು ಪ್ರತಿ ಲೀ.ಗೆ 21.1 ಕಿ.ಮೀ.ವರೆಗೆ ಮೈಲೇಜ್ ನೀಡುತ್ತದೆ. ಹಾಗೆಯೇ 1.0-ಲೀಟರ್ ಟರ್ಬೊ-ಪೆಟ್ರೋಲ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆವೃತ್ತಿಯು ಪ್ರತಿ ಲೀ.ಗೆ 19.8 ಕಿ.ಮೀ.ನಷ್ಟು ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.