ಸಾಲ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಬ್ಯಾಂಕ್ಗಳು ಕೂಡ ನಾನಾ ರೀತಿಯ ಸಾಲಗಳನ್ನು ಗ್ರಾಹಕರಿಗೆ ನೀಡುತ್ತವೆ. ಸಾಲವನ್ನು ಪಡೆಯುವ ಮೊದಲು ಸಾಲಗಾರರು ಮರುಪಾವತಿಯ ನಿಯಮಗಳು, ಬಡ್ಡಿ ಶುಲ್ಕಗಳು ಮತ್ತು ಇತರ ಶುಲ್ಕಗಳನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಮುಖ್ಯವಾಗಿದೆ. ಅದಲ್ಲದೆ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮ ಬಿಗಿಯಾಗಿದೆ. ಅದರಲ್ಲೂ ಪರ್ಸನಲ್ ಲೋನ್ ನಿಯಮ ಕಠಿಣವಾಗಿದೆ.
ಪರ್ಸನಲ್ ಲೋನ್ನಲ್ಲಿರುವ ನಿಯಮದಲ್ಲಿನ ಸಣ್ಣ ಲೋಪಗಳಿಂದ ಹಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲ ಈ ಅವಕಾಶ ಬಳಸಿ ಹೆಚ್ಚು ಸಾಲ ಪಡೆದು ದಿವಾಳಿಯಾಗುವ, ಸಾಲ ಪಾವತಿಸದೇ ಸಂಕಷ್ಟಕ್ಕೆ ಸಿಲುಕಿರುವ ಘಟನೆಗಳು ಹೆಚ್ಚಾಗಿದೆ. ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಹೊಸ ನಿಯಮ ಜಾರಿಗೆ ತಂದಿದೆ. ಹೊಸ ನಿಯಮದಲ್ಲಿ ಪರ್ಸನಲ್ ಲೋನ್ ಮೇಲೆ ಮೂಗುದಾರ ಹಾಕಲಾಗಿದೆ.
ಆರ್ಬಿಐ ಹೊಸ ನಿಯಮದ ಅಡಿಯಲ್ಲಿ ಸಾಲ ನೀಡುವ ಬ್ಯಾಂಕ್ಗಳು ಅಥವಾ ಇತರ ಸಂಸ್ಥೆಗಳು ಸಾಲ ಪಡೆದವನ ಮಾಹಿತಿ, ಸಾಲದ ಮೊತ್ತ, ಸಿಬಿಲ್ ಸ್ಕೋರ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು 15 ದಿನಗಳ ಒಳಗೆ ಅಪ್ಡೇಟ್ ಮಾಡಬೇಕ. ಇದುವರೆಗೆ 30 ದಿನಗಳ ಕಾಲಾವಕಾಶವಿತ್ತು. ಆದರೆ ಇದೀಗ ಕೇವಲ 15ದಿನಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಏಕಕಾಲಕ್ಕೆ ವಿವಿಧ ಬ್ಯಾಂಕ್ಗಳಲ್ಲಿ ಪರ್ಸನಲ್ ಲೋನ್ ಪಡೆಯುವುದು ತಪ್ಪಲಿದೆ ಎಂದು ಆರ್ಬಿಐ ಹೇಳಿದೆ.
IAF Recruitment: ಭಾರತೀಯ ವಾಯುಪಡೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಂದೇ ಅರ್ಜಿ ಸಲ್ಲಸಿ
ಇದುವರೆಗೆ ಸಾಲ ಪಡೆದ 40 ದಿನಗಳ ಬಳಿಕವೇ ಮತ್ತೊಂದು ಸಾಲ ನೀಡುವ ಬ್ಯಾಂಕ್ಗೆ ಈ ಕುರಿತು ಮಾಹಿತಿಗಳು ಲಭ್ಯವಾಗುತ್ತಿತ್ತು. ಇದರಿಂದ ಹಲವರು ಒಂದು ಬ್ಯಾಂಕ್ನಿಂದ ಪರ್ಸನಲ್ ಲೋನ್ ಪಡೆದು, ಮತ್ತೊಂದು ಬ್ಯಾಂಕ್ಲ್ಲೂ ಅರ್ಜಿ ಹಾಕಿ ಸಾಲ ಪಡೆಯುತ್ತಿದ್ದರು. ಇದನ್ನು ತಪ್ಪಿಸಲು ಆರ್ಬಿಐ ಹೊಸ ನಿಯಮ ಜಾರಿಗೆ ತಂದಿದೆ. ಒಂದು ಪರ್ಸನಲ್ ಲೋನ್ ಪಡೆದ ಬಳಿಕ ಇನ್ಯಾವುದೇ ಬ್ಯಾಂಕ್ನಲ್ಲಿ ಅದೇ ವ್ಯಕ್ತಿಗ, ಅದೇ ಸಮಯದಲ್ಲಿ ಪರ್ಸನಲ್ ಲೋನ್ ಪಡೆಯಲು ಸಾಧ್ಯವಿಲ್ಲ. ಒಂದು ಪರ್ಸನಲ್ ಲೋನ್ ಚಾಲ್ತಿಯಲ್ಲಿರುವಾಗ ಮತ್ತೊಂದು ಪರ್ಸನಲ್ ಲೋನ್ ಪಡೆಯಲು ಸಾಧ್ಯವಿಲ್ಲ. ಇದಕ್ಕೆ ಆರ್ಬಿಐ ನಿಯಮ ಬಿಗಿ ಗೊಳಿಸಿದೆ.
ಪರ್ಸನಲ್ ಲೋನ್ ಪಡೆದ ಬಳಿಕ ಬೇರೆ ಮನೆ ಸಾಲ, ವಾಹನ ಸಾಲ ಸೇರಿದಂತೆ ಬೇರೆ ಸಾಲ ಪಡೆಯಲು ಅವಕಾಶವಿದೆಯಾ ಅನ್ನೋ ಪ್ರಶ್ನೆ ಇಲ್ಲಿ ಮೂಡುತ್ತದೆ. ಇದಕ್ಕೂ ಆರ್ಬಿಐ ಉತ್ತರ ನಿಡಿದೆ. ಉದಾಹರಣೆಗೆ ಪರ್ಸನಲ್ ಲೋನ್ ಪಡೆದ ಬಳಿಕ ಕಾರು ಸಾಲ ಅಥವಾ ಇನ್ಯಾವುದೇ ಇತರ ಸಾಲ ಪಡೆಯಲು ಅವಕಾಶವಿದೆ. ಆದರೆ ಸಾಲ ಪಡೆಯುವವನ ಆದಾಯ, ತೆಗೆದುಕೊಂಡಿರುವ ಸಾಲಕ್ಕೆ ಕಟ್ಟುತ್ತಿರುವ ಇಎಂಐ ಸೇರಿದಂತೆ ಸಾಲ ಮರುಪಾವತಿ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಬ್ಯಾಂಕ್ ಇದಕ್ಕಾಗಿ ಅನುಪಾತ ನಿಯಮವಿದೆ. ಈ ನಿಯಮವನ್ನು ಮತ್ತಷ್ಟು ಕಠಿಣಗೊಳಿಸಿದೆ.