ಕಲಘಟಗಿ :-ತಾಲೂಕಿನ ಮುಕ್ಕಲ್ಲ ಕ್ಲಸ್ಟರ್ ನ ನವೀಕೃತ ಸಂಪನ್ಮೂಲ ಕೇಂದ್ರದ ಉದ್ಘಾಟನಾ ಸಮಾರಂಭ ಜರುಗಿದೆ.
ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಯಿತು. ನವೀಕೃತ ಕಟ್ಟಡವನ್ನು ದಾನಿಗಳ ಸಹಕಾರದಿಂದ ಅಂದಾಜು 1 ಲಕ್ಷ ರೂಪಾಯಿ ಹಣವನ್ನು ವ್ಯಯಿಸಿ ನವೀಕರಿಸಲಾಗಿದೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಿನ ಹಿರಿಯ ಶಿಕ್ಷಕರು ಶ್ರೀ B.B ಕಿಚಡಿ ಸರ್ ರವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟಕರಾಗಿ ತಾಲೂಕಿನ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಗಳಾದ ಶ್ರೀ ಕುಮಾರ K F ಸರ್ ಆಗಮಿಸಿ ನವೀಕೃತ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಸಿ ಆರ್ ಸಿ ಕೇಂದ್ರ ನವೀಕರಣ ಕಾರ್ಯದಲ್ಲಿ ಎಲ್ಲ ಶಿಕ್ಷಕರು ಪಾಲ್ಗೊಂಡಿದ್ದು ಶ್ಲಾಘನೀಯ ಎಂದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ *ಶ್ರೀ ಪ್ರಭು ಗ್ಯಾನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿ ನವೀಕೃತ ಕೇಂದ್ರ ನಿರ್ಮಾಣ ಮಾಡಲು ಸಹಕರಿಸದ ಎಲ್ಲ ಮಹನೀಯರಿಗೆ ಧನ್ಯವಾದ ಅರ್ಪಿಸುತ್ತಾ ಅವರೆಲ್ಲರ ಸಲಹೆ ಸಹಕಾರವನ್ನು ನೆನೆದರು.
ಸಂದರ್ಭದಲ್ಲಿ ಕಲಘಟಗಿ ತಾಲೂಕಿನ ನೌಕರ ಸಂಘದ ಅಧ್ಯಕ್ಷರಾದ ಶ್ರೀ R.M ಹೊಲ್ತಿಕೋಟಿ ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷರು ಶ್ರೀ S.A. ಚಿಕ್ಕನರ್ತಿ*, ತಾಲೂಕ ಪತ್ತು ಬೆಳೆಸುವ ಸಹಕಾರಿ ಸಂಘದ ಅಧ್ಯಕ್ಷರು ಶ್ರೀ C.S. ಗ್ಯಾನಪ್ಪನವರ, GPT ಶಿಕ್ಷಕರ ಸಂಘದ ಅಧ್ಯಕ್ಷರು ಶ್ರೀ ರಾಜು. ಲಮಾಣಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕೋಶಾಧ್ಯಕ್ಷರು ಶ್ರೀ ಜಗದೀಶ ವಿರಕ್ತಮಠ ತಾಲೂಕ ಶಿಕ್ಷಕರ ಸಂಘದ ಉಪಾಧ್ಯಕ್ಷರು ಶ್ರೀ ಮುಕುಂದ.ಅಂಚಟಗೇರಿ,ಎನ್ ಪಿ ಎಸ್ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಮಹೇಶ ಧೂಳಿಕೊಪ್ಪ ಕ್ಲಸ್ಟರ್ ನ ಎಲ್ಲ ಶಾಲೆಯ ಪ್ರಧಾನ ಗುರುಗಳು ಸಹ ಶಿಕ್ಷಕರು,
ತಾಲೂಕಿನ ಎಲ್ಲ ಕ್ಲಸ್ಟರ್ ಗಳ CRP ಗಳು, ಚಿತ್ರ ಕಲಾ ಶಿಕ್ಷಕರು ಭಾಗವಹಿಸಿದ್ದರು.
ಶ್ರೀ ಉಮೇಶ ಬೇರೂಡಗಿ ಶಿಕ್ಷಕರು ನಿರೂಪಿಸಿದರು.ಶ್ರೀ ಪ್ರಕಾಶ ಮೂರೋಪಂತರ ಶಿಕ್ಷಕರು ವಂದಿಸಿದರು
ವರದಿ: ಮಾರುತಿ ಲಮಾಣಿ