ಗದಗ:- ಗದಗ ಜಿಲ್ಲಾ ಪೊಲೀಸರು ಮನೆಕಳ್ಳತನ ನಿಯಂತ್ರಣಕ್ಕೆ ತರಲು ಬೆಸ್ಟ್ ಪ್ಲಾನ್ ಮಾಡಿದ್ದು, ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಮ್ ಅಳವಡಿಕೆ ಮಾಡಿದ್ದಾರೆ.
ಈ ಮೂಲಕ ಗದಗ- ಬೆಟಗೇರಿ ಅವಳಿ ನಗರದ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮೀಣ ಭಾಗಗಳಲ್ಲಿ ಪೊಲೀಸ್ ಇಲಾಖೆಯ ವಾಹನದಲ್ಲಿ ಧ್ವನಿ ವರ್ಧಕ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಬಹಳ ದಿನಗಳ ಕಾಲ ಮನೆಯಿಂದ ಹೊರಗಡೆ ಹೋಗುವಾಗ ಮನೆಯಲ್ಲಿ ಚಿನ್ನ, ಬೆಳ್ಳಿ, ಹಣ ಇಡಬಾರದು. ಹಾಗೆಯೇ ಪೊಲೀಸ್ ಇಲಾಖೆಯ ನಂಬರ್ ಮೆಸೇಜ್ ಅಥವಾ ವಾಟ್ಸ್ ಆಪ್ ಮಾಡುವಂತೆ, ಮನೆ ಮನೆಗೆ ಹೋಗಿ ಕರಪತ್ರಗಳನ್ನು ನೀಡುತ್ತಿದ್ದಾರೆ. ಜನರು ಕೂಡ ಪೊಲೀಸ್ ಇಲಾಖೆಯೊಂದಿಗೆ ಸಾಥ್ ನೀಡಿದ್ರೆ, ಬೀಗ್ ಹಾಕಿದ ಮನೆಗಳ ಕಳ್ಳತನ ಪ್ರಕರಣಗಳನ್ನು ನಿಯಂತ್ರಣ ಮಾಡಬಹುದು ಎಂದು ಗದಗ ಎಸ್ಪಿ ಬಿ ಎಸ್ ನೇಮಗೌಡ ಹೇಳಿದ್ದಾರೆ.
ಇನ್ನು ಈ ವರ್ಷದ ಜನವರಿ ತಿಂಗಳಲ್ಲಿ 7 ಪ್ರಕರಣಗಳು ಹಾಗೂ ಫೆಬ್ರವರಿ ತಿಂಗಳಲ್ಲಿ 21 ಪ್ರಕರಣಗಳು ದಾಖಲಾಗಿದ್ದು, ಮಾರ್ಚ್ ತಿಂಗಳಲ್ಲಿ ಕೂಡ ಮನೆಕಳ್ಳರ ಹಾವಳಿ ಮುಂದುವರೆದಿದೆ. ಹೀಗಾಗಿ ಪೊಲೀಸ್ ಇಲಾಖೆ ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಮ್ ಮೊರೆ ಹೋಗಿದ್ದಾರೆ. ಮನೆ ಮಾಲೀಕರು ಪೊಲೀಸ್ ಇಲಖೆ ನೀಡಿರುವ ನಂಬರಿಗೆ ಹೆಲ್ಪ್ ಎಂದು ಮೆಸೇಜ್ ಮಾಡಿದ್ರೆ ಸಾಕು, ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೈಟ್ ಬಿಟ್, ಡೇ ಬಿಟ್ ಇರುವ ಸಿಬ್ಬಂದಿಗಳು ಅಂತಹ ಮನೆಗಳ ಮೇಲೆ ನಿಗಾ ವಹಿಸುತ್ತಾರೆ. ಈಗಾಗಲೇ ಗದಗ ಜಿಲ್ಲೆಯಲ್ಲಿ ನಡೆದ ಕಳ್ಳತನ ಪ್ರಕರಣಗಳು, ಪತ್ತೆ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.