ಬಿಗ್ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ ಶುರುವಾಗಿದೆ. ಮೊದಲು ಕಾರ್ತಿಕ್ ಮತ್ತು ಸಂಗೀತಾ ಲವ್ ಸ್ಟೋರಿ ಈಗಲೂ ಪೀಕ್ನಲ್ಲಿಯೇ ಇದೆ. ಇದಾದ ಮೇಲೆ ಮೈಕಲ್ ಮತ್ತು ಇಶಾನಿ ಜೋಡಿ ಓಪನ್ ಆಗಿಯೇ ಹೇಳಿಕೊಂಡಿದೆ. ಅದರ ಮಧ್ಯೆ ಇನ್ನೂ ಒಂದು ಲವ್ಲಿ ಸ್ಟೋರಿ ಈ ವಾರ ರಿವೀಲ್ ಆಗಿದೆ.
ಕಿಚ್ಚನ ವಾರದ ಕಥೆಯಲ್ಲಿಯೇ ಇದೆಲ್ಲ ರಿವೀಲ್ ಆಗಿದೆ. ಇದರ ಆ ಲವ್ ಸ್ಟೋರಿಯ ಪ್ರೇಮಿಗಳು ಯಾರು? ಪರಸ್ಪರ ಇವರು ಒಪ್ಪಿಕೊಂಡ್ರೇ? ಇದಕ್ಕೆ ಉತ್ತರ ಸಿಂಪಲ್ ಆಗಿಯೇ ಇದೆ.
ಬಿಗ್ ಬಾಸ್ ಮನೆಯೊಳಗೆ ಏನೇನೋ ಆಗುತ್ತದೆ. ಅದರ ಲವ್ ಸ್ಟೋರಿ ಕೂಡ ವಿಶೇಷವಾಗಿಯೇ ಕಾಣಿಸುತ್ತವೆ. ಪ್ರತಿ ಸೀಸನ್ನಲ್ಲೂ ಇಂತಹ ಒಂದಷ್ಟು ಲವ್ ಸ್ಟೋರಿ ಇರುತ್ತವೆ. ಎಲ್ಲ ಸಕ್ಸಸ್ ಆಗುತ್ತವೆ ಅಂತ ಹೇಳೋದು ಕಷ್ಟ. ಆ ಲೆಕ್ಕದಲ್ಲಿ ಚೆಂದನ್ ಶೆಟ್ಟಿ-ನಿವೇದಿತಾ ಸ್ಟೋರಿ ಸೂಪರ್ ಹಿಟ್ ಆಗಿದೆ.
ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ. ಜೋಡಿ ಇನ್ನೂ ಮೋಡಿ ಮಾಡ್ತಾನೇ ಇದೆ. ಅರ್ಧಂಬರ್ಧ ಪ್ರೇಮಕಥೆ ಅನ್ನುವ ಸಿನಿಮಾ ಕೂಡ ಮಾಡುತ್ತಿದ್ದಾರೆ. ಅದೇ ರೇಂಜ್ಗೇನೆ ಬಿಗ್ ಬಾಸ್-10 ನಲ್ಲಿ ಕಾರ್ತಿಕ್ ಮತ್ತು ಸಂಗೀತಾ ಲವ್ ಸ್ವಲ್ಪ ಜಾಸ್ತಿನೇ ಸೀರಿಯೆಸ್ ಆಗಿ ಕಾಣಿಸುತ್ತಿದೆ.
ಇದರ ಮಧ್ಯೆ ನೈಜೇರಿಯನ್ ಕನ್ನಡಿಗ ಮೈಕಲ್ ಮತ್ತು ಇಶಾನಿ ಲವ್ ಸ್ಟೋರಿ ಕೂಡ ಇಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ. ಇವರ ನಡುವೆ ಕಿತ್ತಾಟವೂ ಇಲ್ಲಿ ಇದ್ದೇ ಇದೆ. ಆದರೆ ಇದರ ಮಧ್ಯೆ ಇನ್ನೂ ಒಂದು ಲವ್ ಸ್ಟೋರಿ ಇಲ್ಲಿ ಅರಳಿ ಇದೆ. ಇದನ್ನ ತುಂಬಾನೆ ಹತ್ತಿರದಿಂದ ನೋಡಿದವ್ರು ಬೇರೆ ಯಾರೋ ಅಲ್ಲ. ಅದು ತುಕಾಲಿ ಸಂತು ಅಂತಲೇ ಹೇಳಬಹುದು.
ವರ್ತೂರು ಸಂತೋಷ್ ಮತ್ತು ತನಿಷಾ ಮಧ್ಯೆ ಲವ್ ಇದಿಯಾ? ಇದನ್ನ ಯಾರೂ ಗೆಸ್ ಮಾಡೋಕೆ ಸಾಧ್ಯವೇ ಇಲ್ಲ. ಈ ಬಗ್ಗೆ ವರ್ತೂರು ಸಂತೋಷ ಏನೂ ಹೇಳೋದಿಲ್ಲ. ಆದರೆ ಒಂದು ಸ್ಮೈಲ್ ಕೊಡ್ತಾರೆ. ಹಾಗಂತ ತನಿಷಾ ಒಪ್ಪಿಕೊಂಡಿದ್ದಾರೆ ಅಂತ ಹೇಳೋದು ಕಷ್ಟವೇ ಸರಿ.
ಆದರೆ ವರ್ತೂರು ಸಂತೋಷ್ ಒಂದು ವಾರ ಹೊರಗೆ ಹೋಗಿ ಬಂದ್ರು. ಹಾಗೆ ವಾಪಸ್ ಬರೋ ಒಂದು ದಿನ ಮೊದಲೇ ತನಿಷಾಗೆ ಒಂದು ಕನಸು ಕೂಡ ಬಿದ್ದಿತ್ತು. ಮರು ದಿನ ವರ್ತೂರು ಸಂತೋಷ್ ಮನೆಗೆ ಬರ್ತಾರೆ ಅನ್ನೋದೇ ಆ ಕನಸಿನ ಕಂಟೆಂಟ್ ಆಗಿತ್ತು. ಅದನ್ನ ತನಿಷಾ ಮನೆಯ ಇತರ ಸದಸ್ಯರ ಜೊತೆಗೂ ಹೇಳಿಕೊಂಡಿದ್ದರು.
ಅದರಂತೆ ಮರು ದಿನವೇ ವರ್ತೂರು ಸಂತೋಷ್ ಮನೆಗೆ ವಾಪಾಸ್ ಆದರು. ಅಲ್ಲಿಗೆ ಏನೋ ಒಂದು ಹೊಸ ಫೀಲಿಂಗ್ ಕೂಡ ಅಲ್ಲಿರೋ ಮೂಡಿತ್ತು. ಅದರಲ್ಲಿ ವಿಶೇಷವಾಗಿ ತುಕಾಲಿ ಸಂತು ಇದನ್ನ ತುಂಬಾನೆ ಹತ್ತಿರದಿಂದಲೇ ನೋಡಿದ್ದರು. ಈ ಒಂದು ಕಿಚ್ಚನ ವಾರದ ಕಥೆಯಲ್ಲಿ ರಿವೀಲ್ ಆಗಿತ್ತು. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುಟ್ನಂಜ ಚಿತ್ರದ ಪುಟ್ಟ ಮಲ್ಲಿ ಪುಟ್ಟ ಮಲ್ಲಿ ಹಾಡಿಗೂ ಕಿಚ್ಚ ಈ ಜೋಡಿಯನ್ನ ಕುಣಿಸಿಯೇ ಬಿಟ್ಟರು.
ಹಾಗೆ ಬಿಗ್ ಮನೆಯ ಮತ್ತೊಂದು ಲವ್ ಸ್ಟೋರಿ ಇಲ್ಲಿ ಅರಳುತ್ತಿದೆ.