ಬಳ್ಳಾರಿ: ಕೇಂದ್ರ ಸರ್ಕಾರದ ಅಮೃತ್ ಭಾರತ್ ಯೋಜನೆ ಅಡಿಯಲ್ಲಿ ನಗರದಲ್ಲಿನ ಬ್ರಿಟಿಷ್ ಕಾಲದ ಪಾರಂಪಾರಿಕ ಕಟ್ಟಡವಾಗಿರುವ ರೈಲ್ವೇ ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ರೈಲ್ವೇ ನಿಲ್ದಾಣಕ್ಕೆ ಹೊಸ ಮೆರುಗು ನೀಡಲಾಗುತ್ತಿದೆ. ನಗರದಲ್ಲಿನ ಬ್ರಿಟಿಷ್ ಕಾಲದ ಪಾರಂಪಾರಿಕ ಕಟ್ಟಡಗಳಲ್ಲಿ ರೈಲು ನಿಲ್ದಾಣ ಒಂದಾಗಿದ್ದು,
ಮೂಲ ರೈಲ್ವೇ ನಿಲ್ದಾಣ ಕಟ್ಟಡಕ್ಕೆ ಯಾವುದೇ ರೀತಿಯ ಧಕ್ಕೆ ಆಗದ ರೀತಿಯಲ್ಲಿ ರೈಲ್ವೆ ನಿಲ್ದಾಣವನ್ನು ನವೀಕರಣಗೊಳಿಸಲಾಗುತ್ತಿದೆ. ನಗರದಲ್ಲಿ ರೈಲು ನಿಲ್ದಾಣದಲ್ಲಿ ನಾಲ್ಕು ಪ್ಲಾಟ್ ಫಾರಂಗಳಿವೆ. ದಿನ ನಿತ್ಯ ಈ ರೈಲ್ವೆ ನಿಲ್ದಾಣದ ಮೂಲಕ ಬೆಂಗಳೂರು, ಹುಬ್ಬಳ್ಳಿ, ಹೈದ್ರಾಬಾದ್, ಚನೈ, ಮುಂತಾದ ರಾಜ್ಯಗಳಿಗೆ ರೈಲು ಸಂಪರ್ಕವಿದ್ದು, ಸಾವಿರಾರು ಪ್ರಯಾಣಿಕರು ಸಂಚಾರ ನಡೆಸುತ್ತಾರೆ.
ಏನೇನೂ ಅಭಿವೃದ್ಧಿ..?
ಕೇಂದ್ರ ಸರ್ಕಾರದ ಅಮೃತ್ ಭಾರತ್ ಯೋಜನೆ ಅಡಿಯಲ್ಲಿ ಸುಮಾರು ೧೫ ಕೋಟಿ ವೆಚ್ಚದಲ್ಲಿ ರೈಲ್ವೇ ನಿಲ್ದಾಣ ಕಟ್ಟಡದ ಪ್ಲಾಟ್ ಫಾರಂ ನವೀಕರಣ, ರೈಲ್ವೆ ನಿಲ್ದಾಣದ ಮೇಲ್ಚಾವಣೆ ನವೀಕರಣ, ಮಹಡಿಗಳ ನವೀಕರಣ, ಕಚೇರಿಗಳನ್ನು ನವೀಕರಣಗೊಳಿಸುವ ಅಬಿವೃದ್ಧಿ ಕಾಮಗಾರಿ ಕೆಲಸ ಹಾಗೂ ರೈಲು ನಿಲ್ದಾಣಕ್ಕೆ ಹೊಸದಾಗಿ ವಿದ್ಯುತ್ ಸಂಪರ್ಕ ಕೆಲಸ ಮತ್ತು ಹೊಸದಾಗಿ ಸುಣ್ಣ ಬಣ್ಣ ಬಳಿಯುವ ಕೆಲಸ ಶರವೇಗದಲ್ಲಿ ನಡೆಯುತ್ತಿದೆ.
ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸುಮಾರು ೧.೫೮ ಕೋಟಿ ವೆಚ್ಚದಲ್ಲಿ ಒಂದು ಲಿಫ್ಟ್ ಗಳನ್ನು ಹಾಗೂ ೨.೪ ಕೋಟಿ ವೆಚ್ಚದಲ್ಲಿ ಎರಡು ಎಸ್ಕಲೇಟರ್ ಗಳನ್ನು ನಿರ್ಮಾಣ ಮಾಡಲಾಗಿದ್ದು ಅವು ಈಗಾಗಲೇ ಕಾರ್ಯನಿರ್ವಸುತ್ತಿವೆ.
ರೈಲು ನಿಲ್ದಾಣದ ಇತಿಹಾಸ
೧೮೯೬ ರಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ರೈಲು ನಿಲ್ದಾಣ ಅತ್ಯಂತ ಹಳೆಯ ರೈಲ್ವೆ ನಿಲ್ದಾಣಗಳಲ್ಲಿ ಒಂದಾಗಿದೆ. ಸ್ವಾತಂತ್ರö್ಯ ಸಂಗ್ರಾಮದ ಸಂದರ್ಭದಲ್ಲಿ ೧೯೨೧ರ ಅ.೧ ರಂದು ಮಹಾತ್ಮ ಗಾಂಧೀಜಿ ಅವರು ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಕರ್ನಾಟಕ ಆಂಧ್ರಪ್ರದೇಶದ ಮುಖಂಡರಲ್ಲಿ ಒಮ್ಮತದ ಅಭಿಪ್ರಾಯ ಮೂಡದ ಹಿನ್ನೆಲೆ ಮುಖಂಡರನ್ನು ರೈಲ್ವೆ ನಿಲ್ದಾಣಕ್ಕೆ ಬರುವಂತೆ ಹೇಳಿ ಸುಮಾರು ಎಂಟು ಗಂಟೆಗಳ ಕಾಲ ಬಳ್ಳಾರಿ ರೈಲ್ವೆ ನಿಲ್ದಾಣಗಳಲ್ಲಿ ತಂಗಿದ್ದರು.
ಮಖಂಡರಲ್ಲಿ ಸೌಹಾರ್ದತೆ ಮಾತುಗಳನ್ನು ಹೇಳಿ ತದನಂತರ ಧಾರವಾಡಕ್ಕೆ ಪ್ರಯಾಣ ಬೆಳೆಸಿದ್ದರು. ಬಳ್ಳಾರಿ ಬ್ರಿಟಿಷ್ ಕಾಲದ ಪಾರಂಪಾರಿಕ ಕಟ್ಟಡಗಳಲ್ಲಿ ನಗರದಲ್ಲಿನ ರೈಲು ನಿಲ್ದಾಣ ಒಂದಾಗಿದ್ದು, ಮೂಲ ರೈಲ್ವೇ ನಿಲ್ದಾಣ ಕಟ್ಟಡಕ್ಕೆ ಯಾವುದೇ ರೀತಿಯ ಧಕ್ಕೆ ಆಗದ ರೀತಿಯಲ್ಲಿ ರೈಲ್ವೆ ನಿಲ್ದಾಣವನ್ನು ನವೀಕರಣಗೊಳಿಸಲಾಗುತ್ತಿದೆ.
ಚನ್ನಕೇಶವ ಕಂಪ್ಲಿ