ಬೆಂಗಳೂರು:- ನಗರದಲ್ಲಿ ಓಡಾಡುತ್ತಿರುವ ಕೋಟ್ಯಂತರ ವಾಹನ ಚಾಲಕರಲ್ಲಿ ಹಲವರ ಬಳಿ ಡ್ರೈವಿಂಗ್ ಲೈಸನ್ಸ್ ಇರುವುದೇ ಇಲ್ಲ. ಹಾಗೆಯೇ ಸುಮ್ಮನೇ ವಾಹನಗಳನ್ನು ತೆಗೆದುಕೊಂಡು ಸುತ್ತಾಡುತ್ತಿರುತ್ತಾರೆ. ಅಂಥವರಲ್ಲಿ ಕೆಲವರು ಡ್ರಂಕ್ ಆ್ಯಂಡ್ ಡ್ರೈವ್ ಮಾಡುತ್ತಿರುತ್ತಾರೆ.
ನಾಲ್ವರ ಗುಂಪಿನಿಂದ ಓರ್ವನ ಮೇಲೆ ಹಲ್ಲೆ: ಪುಂಡರ ವಿರುದ್ಧ ದಾಖಲಾಯ್ತು FIR!
ಹೀಗೆ ಕುಡಿದು ವಾಹನ ಚಾಲನೆ ಮಾಡುವುದರಿಂದಾಗಿ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇಷ್ಟು ದಿನ ಡ್ರಂಕ್ ಆ್ಯಂಡ್ ಡ್ರೈವ್ಗೆ ದಂಡ ಮಾತ್ರ ವಿಧಿಸಲಾಗುತ್ತಿತ್ತು. ಆದರೆ, ಈಗ ಕುಡಿದು ವಾಹನ ಚಾಲನೆ ಮಾಡುವವರ ಬಳಿ ಡ್ರೈವಿಂಗ್ ಲೈಸನ್ಸ್ ಇಲ್ಲದೇ ಹೋದರೆ ಎಫ್ಐಆರ್ ದಾಖಲಿಸಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗುತ್ತಿದೆ.
ಕೇವಲ ವಾಹನ ಚಾಲನೆ ಮಾಡುವವರಿಗೆ ಮಾತ್ರ ಈ ಶಿಕ್ಷೆಯಲ್ಲ. ವಾಹನದ ಆರ್ಸಿ ಯಾರ ಹೆಸರಲ್ಲಿ ಇದೆಯೋ ಅವರ ಮೇಲೂ ಕೇಸ್ ಹಾಕಲಾಗುತ್ತಿದೆ. ಸದ್ಯ ಈ ಪ್ರಕ್ರಿಯೆ ಬೆಂಗಳೂರಲ್ಲಿ ಶುರುವಾಗಿದ್ದು, ಪ್ರತಿ ದಿನ ಹತ್ತಾರು ಎಫ್ಐಆರ್ ದಾಖಲಾಗುತ್ತಿವೆ.
ಹೀಗಾಗಿ ವಾಹನ ಮಾಲೀಕರು ಹುಷಾರಾಗಿಲ್ಲದಿದ್ದರೆ ಕಷ್ಟವಿದೆ. ಸ್ನೇಹಿತರು, ಸಂಬಂಧಿಕರು, ಪರಿಚಯದವರು ಕೇಳಿದರೆಂದು ಹಿಂದೆಮುಂದೆ ವಿಚಾರಿಸದೆ ವಾಹನ ಕೊಟ್ಟರೆ ನಾಳೆ ಕೋರ್ಟ್ಗೆ ಅಲೆಯಬೇಕಾಗಬಹುದು.
ಹೀಗಾಗಿ ಬೇರೆಯವರ ಕೈಗೆ ವಾಹನ ಕೊಡೋ ಮುಂಚೆ ಹುಷಾರಾಗಿರಿ.