ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆ ಹೆಚ್ಚುತ್ತಿದೆ. ಮನೆಯಲ್ಲಿ ಫೋನ್ ಹೊಂದಿರದ ವ್ಯಕ್ತಿ ಸಿಗೋದೇ ಅಪರೂಪ… ಈಗ ಈ ಸ್ಮಾರ್ಟ್ ಫೋನ್ ಅನ್ನೋದು ಮನುಷ್ಯನ ಒಂದು ಅಂಗವೇ ಆಗಿಬಿಟ್ಟಿದೆ.. ಆದ್ರೆ, ಮಾತಾಡುವಾಗ ಅದನ್ನು ಬೀಳಿಸಿಕೊಳ್ಳುವುದು, ಎಲ್ಲೋ ಇಟ್ಟಿದ್ದಾಗ ಅದರ ಮೇಲೆ ನೀರು ಬೀಳುವುದು ನಡೆಯುತ್ತಿರುತ್ತದೆ.. ಆಗ ಕೆಲವರು ನೀರು ಬಿದ್ದ ಫೋನ್ ಅನ್ನು ಅಕ್ಕಿಯಲ್ಲಿ ಮುಳುಗಿಸಿ ಇಡುತ್ತಾರೆ.. ಅಕ್ಕಿಯೊಳಗೆ ಫೋನ್ ಇಟ್ಟರೆ ಫೋನ್ ಒಳಗೆ ಹೋಗಿರುವ ನೀರನ್ನು ಆ ಅಕ್ಕಿ ಹೀರಿಕೊಳ್ಳುತ್ತದೆ. ಇದರಿಂದ ಫೋನ್ ಸರಿಹೋಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ.
ಯಾರೊಂದಿಗೋ ಮಾತನಾಡುತ್ತಿರುತ್ತೀರಿ.. ಅದು ಜಾರಿ ನೀರಿನಲ್ಲಿ ಬೀಳುತ್ತದೆ.. ತಕ್ಷಣವನೇ ಅದನ್ನು ತೆಗೆಯುತ್ತೀರಿ.. ಆದ್ರೆ ಅಷ್ಟರಲ್ಲಿ ಸ್ವಲ್ಪ ನೀರು ಫೋನಿನೊಳಗೆ ಹೋಗಿರುತ್ತದೆ.. ಅಂತಹ ಒದ್ದೆಯಾದ ಫೋನ್ ಅನ್ನು ಒಣಗಿಸಲು ಹಲವು ವಿಧಾನಗಳನ್ನು ನಾವು ಅನುಸರಿಸಬಹುದು.. ಅದರಲ್ಲಿ ಅಕ್ಕಿ ಕೂಡಾ ಒಂದಾಗಿದೆ. ಯಾಕೆ ಗೊತ್ತಾ, ಅಕ್ಕಿಗೆ ತೇವಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವಿದೆ. ಆದ್ದರಿಂದ ನೀರಿನಿಂದ ಒದ್ದೆಯಾದ ಮೊಬೈಲ್ ಫೋನ್ಗಳನ್ನು ಒಣಗಿಸಲು ಅಕ್ಕಿಯನ್ನು ಬಳಸಬಹುದು.. ಇದರಿಂದ ಯಾವುದೇ ತೊಂದರೆ ಇಲ್ಲ.. ಆದ್ರೆ ಮೊಬೈಲ್ ಒಳಗೆ ಹೆಚ್ಚು ನೀರು ಹೊಂದಿದ್ದರೆ ಇದು ಕೆಲಸ ಮಾಡುವುದಿಲ್ಲ ಎಂದು ಹೇಳಲಾಗುತ್ತದೆ.
ಫೋನ್ ನೀರಿನಲ್ಲಿ ಬಿದ್ದರೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದಕ್ಕಾಗಿಯೇ ಫೋನ್ ನೀರಿನಲ್ಲಿ ಬಿದ್ದರೆ ಏನು ಮಾಡಬೇಕೆಂದು ನೀವು ಮೊದಲು ತಿಳಿದುಕೊಳ್ಳಬೇಕು. ನಮ್ಮಲ್ಲಿ ಹೆಚ್ಚಿನವರು ಮಾಡುವ ಮೊದಲ ಕೆಲಸವೆಂದರೆ ಒದ್ದೆಯಾದ ಫೋನ್ ಅನ್ನು ಅಕ್ಕಿಗೆ ಹಾಕುವುದು. ಆದರೆ ಇದು ಸರಿಯಾದ ಕೆಲಸವೇ? ಇದು ಪ್ರಯೋಜನಕಾರಿಯಾಗಬಹುದೇ? ತಜ್ಞರು ಏನು ಹೇಳುತ್ತಾರೆಂದು ನೋಡೋಣ.
ಆ್ಯಪಲ್ ಕಂಪನಿಯು ಇತ್ತೀಚೆಗೆ ತನ್ನ ಬಳಕೆದಾರರಿಗೆ ಈ ರೀತಿ ಮಾಡುವುದು ತುಂಬಾ ತಪ್ಪು ಎಂದು ಎಚ್ಚರಿಸಿದೆ. ನೀರಿನಲ್ಲಿ ಬಿದ್ದ ನಂತರ ಅಕ್ಕಿಯ ಅಡಿಯಲ್ಲಿ ಫೋನ್ ಅನ್ನು ಇಟ್ಟರೆ ಸಮಸ್ಯೆ ಉಲ್ಬಣಿಸುತ್ತದೆ ಎಂದು ಆ್ಯಪಲ್ ತನ್ನ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಅಕ್ಕಿಯು ಫೋನ್ನಿಂದ ತೇವಾಂಶವನ್ನು ಹೀರಿಕೊಳ್ಳುತ್ತದೆ ಎಂಬ ಕಾರಣಕ್ಕೆ ಅನೇಕ ಜನರು ಈ ರೀತಿ ಮಾಡುತ್ತಾರೆ. ಆದರೆ, ಹೀಗೆ ಮಾಡುವುದರಿಂದ ಅಕ್ಕಿಯಲ್ಲಿರುವ ಧೂಳು ಮತ್ತು ಸಣ್ಣ ಧಾನ್ಯಗಳು ನಿಮ್ಮ ಫೋನ್ಗೆ ಹಾನಿ ಮಾಡುತ್ತದೆ.
ಹಾಗೆಯೆ ಒದ್ದೆಯಾದ ಫೋನ್ ಅನ್ನು ಸ್ವಚ್ಚಗೊಳಿಸಲು ಹತ್ತಿ ಅಥವಾ ಟಿಶ್ಯೂ ಪೇಪರ್ನಿಂದ ಮತ್ತು ಬ್ಲೋ ಡ್ರೈಯರ್ನಂತಹುಗಳನ್ನು ನೀವು ಬಳಸಬಾರದು ಎಂದು ಆ್ಯಪಲ್ ಹೇಳಿದೆ. ಮಿಂಚಿನ ಬಿಡಿಭಾಗಗಳ ಸಹಾಯದಿಂದ ನೀವು ನಿಮ್ಮ ಫೋನ್ ಅನ್ನು ಗೋಡೆಯ ಔಟ್ಲೆಟ್ಗೆ ಪ್ಲಗ್ ಮಾಡಿದರೆ, ಲಿಕ್ವಿಡ್ ಡಿಟೆಕ್ಟೆಡ್ ಎಂಬ ಆಯ್ಕೆಯು ಕಾಣಿಸಿಕೊಳ್ಳುತ್ತದೆ. ಆ ಎಚ್ಚರಿಕೆಯು ಕಾಣಿಸಿಕೊಂಡ ತಕ್ಷಣ, ಎರಡೂ ತುದಿಗಳಿಂದ ಕೇಬಲ್ ಅನ್ನು ಅನ್ಪಗ್ ಮಾಡಿ ಎಂದು ಹೇಳಿದ್ದಾರೆ.
ನಿಮ್ಮ ಮೊಬೈಲ್ ಪೋರ್ಟ್ ಅನ್ನು ಕೆಲ ಸಮಯ ನೆಲಕ್ಕೆ ಎದುರಾಗಿ ಕೈಯಲ್ಲಿ ಹಿಡಿದುಕೊಳ್ಳಿ. ನಂತರ ಫೋನ್ ಅನ್ನು ಒಣಗಿದ ಸ್ಥಳದಲ್ಲಿ ಕನಿಷ್ಠ 30 ನಿಮಿಷಗಳ ಕಾಲ ಇಡಬೇಕು. ನಂತರ ಅದನ್ನು ಚಾರ್ಜ್ ಮಾಡಲು ಪ್ರಯತ್ನಿಸಬೇಕು. ನಂತರವೂ ಸರಿ ಆಗದಿದ್ದಲ್ಲಿ ನಿಮ್ಮ ಫೋನ್ 24 ಗಂಟೆಗಳ ಕಾಲ ಸಂಪೂರ್ಣವಾಗಿ ಒಣಗಲು ಬಿಡಬೇಕಂತೆ. ನಂತರವೂ ಸರಿಯಾಗದಿದ್ದರೆ ನೀವು ನಿಮ್ಮ ಫೋನ್ ಅನ್ನು ಸರ್ವೀಸ್ ಸೆಂಟರ್ಗೆ ನೀಡುವುದು ಉತ್ತಮ ಎಂದು ಆ್ಯಪಲ್ ಹೇಳಿದೆ.