ನೆಲಮಂಗಲ: ಮನೆಯ ಮುಂದೆ ಇದ್ದ ಶ್ವಾನದ ಮೇಲೆ ದೈತ್ಯ ಚಿರತೆ ದಾಳಿ ಮಾಡಿದ ಘಟನೆ ನೆಲಮಂಗಲ ತಾಲೂಕಿನ ಗೊಟ್ಟಿಗೆರೆ ಕ್ರಾಸ್ ಬಳಿ ರಾತ್ರಿ ಜರುಗಿದೆ.
ಗ್ರಾಮದ ಭರತ್ ಎಂಬುವವರ ತೋಟದ ಮನೆಯಲ್ಲಿ ಇದ್ದ ಶ್ವಾನದ ಮೇಲೆ ಸಂಚು ಹಾಕಿ ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಿರತೆ ಕಾಟದಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ನೆಲಮಂಗಲ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಲಾಗಿದೆ.