ನೆಲಮಂಗಲ :- ಕಳೆದ ೩೦ ವರ್ಷಗಳಿಂದ ಬೈರನಾಯ್ಕನಹಳ್ಳಿ ಗ್ರಾಮದಲ್ಲಿದ್ದ ನ್ಯಾಯಬೆಲೆ ಅಂಗಡಿಯನ್ನು ಯಾವುದೇ ನೋಟೀಸ್ ನೀಡದೇ ಏಕಾಏಕಿ ಆಡಳಿತ ಸರಕಾರದ ಪ್ರಭಾವದಿಂದ ಹಸಿರುವಳ್ಳಿಗೆ ಹೊಸದಾಗಿ ನೀಡಿದ್ದು, ಅನುಮಾನಕ್ಕೆ ಕಾರಣವಾಗಿದೆ ಹಾಗೂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ, ತಹಸೀಲ್ದಾರ್ ನಡೆ ಖಂಡಿಸಿ. ನೆಲಮಂಗಲ ತಾಲೂಕಿನ ಬೈರನಾಯ್ಕನಹಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ, ತಾಲೂಕು ತಹಸೀಲ್ದಾರ್, ಆಹಾರ ಸರಬರಾಜು ಇಲಾಖೆಯ ವಿರುದ್ಧ ಹರಿಹಾಯ್ದರು, ಈ ಕುರಿತು ಒಂದು ವರದಿ ಇಲ್ಲಿದೆ.
ಬೈರನಾಯ್ಕನಹಳ್ಳಿ ಸೇರಿದಂತೆ ಹಸಿರುವಳ್ಳಿ, ಲಕ್ಕಪ್ಪನಹಳ್ಳಿ, ದೊಡ್ಡ ಹುಚ್ಚಯ್ಯನಪಾಳ್ಯ ಗ್ರಾಮದ ೭೦೦ಕ್ಕೂ ಹೆಚ್ಚು ಪಡಿತರ ಚೀಟಿ ಹೊಂದಿದ್ದು, ಕಳೆದ ೩೦ ವರ್ಷದಿಂದ ಭೈರನಾಯಕನಹಳ್ಳಿ ಗ್ರಾಮದಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿತ್ತು, ಆದರೆ ಕಳೆದ ಕೆಲ ತಿಂಗಳ ಹಿಂದೆ ಏಕಾಏಕಿ ಯಾವುದೇ ಸೂಚನೆ, ಆದೇಶ ನೀಡದೆ ನ್ಯಾಯ ಬೆಲೆ ಅಂಗಡಿಯನ್ನು ಹಸಿರುವಳ್ಳಿ ಗ್ರಾಮದಲ್ಲಿ ತೆರೆಯಲು ಅರ್ಜಿ ಆಹ್ವಾನಿಸಿ, ಸರಿಯಾದ ತನಿಖಾ ವರದಿ ನೀಡದೇ ಕಳಲುಘಟ್ಟ ವಿವಿಧೋದ್ದೇಶ ಸಹಕಾರ ಸಂಘದ ನಿರ್ವಹಣೆಗೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ, ತಾಲೂಕು ಆಹಾರ ಸರಬರಾಜು ಇಲಾಖೆಗೆ ಒಂದೇ ಅರ್ಜಿ ಸಂಖ್ಯೆಯ ನಕಲಿ ಇ- ಸ್ಟಾಂಪ್ ಬಳಸಿ ಹಾಗೂ ಸ್ಥಳೀಯ ಶಾಸಕ ಎನ್.ಶ್ರೀನಿವಾಸ್ ರ ಶಿಫಾರಸ್ಸು ಪತ್ರ ಲಗತ್ತೀಸಿ, ಹೊಸ ಪಡಿತರ ಕೇಂದ್ರ ಹಸಿರುವಳ್ಳಿಯಲ್ಲಿ ತೆರೆದಿದ್ದಾರೆ, ಅಧಿಕಾರಿಗಳು ನ್ಯಾಯಯುತ್ತವಾಗಿ ನಡೆಯುತ್ತಿಲ್ಲ, ಅಧಿಕಾರದ ಪ್ರಭಾವದಿಂದ ಕೆಲವರು ಹಸಿರುವಳ್ಳಿಯಲ್ಲಿ ನ್ಯಾಯಬೆಲೆ ಅಂಗಡಿಯನ್ನು ತೆರೆದಿದ್ದಾರೆ,
ಬೈರನಾಯ್ಕನಹಳ್ಳಿ ಗ್ರಾಮಸ್ಥರು, ಈ ತಿಂಗಳು ಪಡೆತರ ಪಡೆದಿಲ್ಲಾ, ಯಾವುದೇ ರಾಜಕೀಯ ಲೇಪ ನ್ಯಾಯಬೆಲೆ ಅಂಗಡಿಗೆ ಬಳಿಯಬಾರದು ಎಂದು ಗ್ರಾ.ಪಂ.ಸದಸ್ಯ ಸಿ.ರಾಜಣ್ಣ ಹೇಳಿದರು.
ಗ್ರಾಮಸ್ಥ ಗಂಗಯ್ಯ ಮಾತನಾಡಿ, ಆಹಾರ ಇಲಾಖೆ ಬೈರನಾಯ್ಕನಹಳ್ಳಿ ನ್ಯಾಯಬೆಲೆ ಅಂಗಡಿಯ ವಿತರಕನ ವಿರುದ್ಧ ಹುನ್ನಾರ ನಡೆಸಿ, ಪಡಿತರ ನೀಡುವ ಕೆಲಸವನ್ನು ಕಿತ್ತುಕೊಂಡಿದೆ, ಚುನಾವಣೆಯಲ್ಲಿ ರಾಜಕೀಯ ಮಾಡಲಿ, ಬೇರೆ ವಿಚಾರದಲ್ಲಿ ರಾಜಕೀಯ ಬೇರೆಸುವುದು ಸರಿಯಲ್ಲಾ, ಇಲಾಖೆ ಮತ್ತು ತಹಸೀಲ್ದಾರ್ ಕೂಡಲೇ ಕ್ರಮ ವಹಿಸಬೇಕು, ಈ ಸ್ಟ್ಯಾಂಪ್ ನಕಲಿ ವಿರುದ್ಧ ನ್ಯಾಯಲಯದ ಮೊರೆಹೋಗಿದ್ದೇನೆ, ಬೈರನಾಯ್ಕನಹಳ್ಳಿ ಮತ್ತೆ ನ್ಯಾಯಬೆಲೆ ಅಂಗಡಿ ವರ್ಗಾಹಿಸಬೇಕು ಎಂದು ಒತ್ತಾಯಿಸಿದರು.