ಬೆಂಗಳೂರು: ನನಗಾಗಲಿ ವಿಶ್ವನಾಥ್ ಅವರಿಗಾಗಲಿ ವೈಯಕ್ತಿಕವಾಗಿ ಯಾವುದೇ ಕಲಹಗಳಿಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಧಾಕರ್ ಹೇಳಿದರು. ವಿಶ್ವನಾಥ್ ಅವರ ನಿವಾಸದ ಬಳಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ನನಗೆ ಕೊಟ್ಟಿದ್ದರಿಂದ ಬೇಸರವನ್ನು ವ್ಯಕ್ತಪಡಿಸಿದ್ದಾರೆ ಅಷ್ಟು ಬಿಟ್ಟರೇ ಬೇರೆ ಏನು ಇಲ್ಲ ಎಂದರು. ಏಳು ಕ್ಷೇತ್ರಗಳಲ್ಲಿ ಪ್ರಚಾರ ಸಭೇ ಆರಂಭವಾಗಿದೆ ಯಲಹಂಕದಲ್ಲಿ ಇನ್ನೂ ಆರಂಭವಾಗಿರಲಿಲ್ಲ,
ಹಲವು ಬಾರಿ ಅವರನ್ನು ಫೋನ್ ಕಾಲ್ ಮತ್ತು ಮೆಸೆಜ್ ಮೂಲಕ ಭೇಟಿ ಮಾಡಲು ಪ್ರಯತ್ನಿಸಿದ್ದೆ ಆದರೇ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ, ಆದ್ದರಿಂದ ಇಂದು ಅವರು ಮನೆಯಲ್ಲಿರಬಹುದು ಎಂದು ಅವರ ನಿವಾಸಕ್ಕೆ ಬಂದಿದ್ದೆ ಆದರೇ, ಅವರ ಮನೆಯ ಸೆಕ್ಯೂರಿಟಿ ಅವರು ಮನೆಯಲಿಲ್ಲ ಕಾರ್ಯಕ್ರಮದ ನಿಮಿತ್ತ ಬೇರೆಡೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಟಿಕೆಟ್ ಸಿಗದಕ್ಕೆ ಸಹಜವಾಗಿಯೇ ಬೇಸರದಿಂದ ಇದ್ದಾರೆ. ಇನ್ನು ಒಂದೆರಡು ಬಾರಿ ಭೇಟಿಯಾಗುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.