ಹುಬ್ಬಳ್ಳಿ,: ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಸದಸ್ಯ ನಿರಂಜನ ಹಿರೇಮಠ ಆಪ್ತ ಸಹಾಯಕ ವಿಜಯ್ ಅಲಿಯಾಸ್ ಈರಣ್ಣ ಅವರನ್ನು ಮೂವರ ತಂಡದ ಗ್ಯಾಂಗ್ನಿಂದ ಅಪಹರಣಕ್ಕೆ ಯತ್ನಿಸಿರುವಂತಹ ಘಟನೆ ಇಂದು ಮುಂಜಾನೆ ನಡೆದಿದೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ ಕರೆಂಟ್ ಬಾಕ್ಸ್ ಬಂದ್ ಮಾಡಿ ವಾಲ್ವೇಕರ್ ಗಲ್ಲಿ ಗಜಾನನ ಬ್ಯಾಂಕ್ ಎದುರುಗಡೆ ಅಪಹರಣಕ್ಕೆ ಯತ್ನಿಸಲಾಗಿದೆ.
ಕಾರಲ್ಲಿ ಬಂದ ಮೂವರು ಕಾರು ಹತ್ತುವಂತೆ ಒತ್ತಾಯಿಸಿದ್ದಾರೆ. ನಾನು ಯಾಕೆ ಕಾರ್ ಹತ್ತುಬೇಕೆಂದು ವಿಜಯ್ ಭಯಗೊಂಡು ಜೇಬಿನಲ್ಲಿದ್ದ ಮೊಬೈಲ್ ತೆಗೆದು ವಿಡಿಯೋ ಮಾಡಲು ಮುಂದಾಗಿದ್ದಾರೆ. ಬಳಿಕ ಮೂವರು ವಿಜಯ್ ಕೈಯಿಂದ ತಪ್ಪಿಸಿಕೊಂಡ ಓಡಿ ಹೋಗಿದ್ದಾರೆ. ಹುಬ್ಬಳ್ಳಿಯ ಘಂಟಿಕೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಳಿಕ 112 ನಂಬರ್ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಜಯ್ ನನ್ನು ಸೇಫ್ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯ ಘಟನೆ ಕುರಿತು ಪರಿಶೀಲನೆ ಮಾಡಲಾಗುತ್ತಿದೆ.
ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆ ಬ್ಯಾಂಕ್ನ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಅಪಹರಣ ಮಾಡಲು ಬಂದವರು ಯಾರು? ಯಾವ ಕಾರಣಕ್ಕೆ ಅಪಹರಣ ಮಾಡಲು ಯತ್ನಿಸಿದರು? ಎಲ್ಲವನ್ನೂ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ರೇಣುಕಾ ಸುಕುಮಾರ್ ಈ ಕುರಿತು ಮಾತನಾಡಿದ್ದು, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಮಾಹಿತಿ ನೀಡಿದ್ದು, ನೇಹಾ ತಂದೆ ನಿರಂಜನ್ ಆಪ್ತ ಸಹಾಯಕನ ಕಿಡ್ನ್ಯಾಪ್ಗೆ ಯತ್ನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.