ಹುಬ್ಬಳ್ಳಿ: ಗೃಹ ಮಂತ್ರಿಗಳಿಗೆ ಜವಾಬ್ದಾರಿ ಇಲ್ಲ, ಮುಖ್ಯಮಂತ್ರಿಗಳದ್ದು ಉಡಾಫೇ ಮಾತು…ತನಿಖೆಗೂ ಮೊದಲೇ ಫ್ರೀ ಜಡ್ಜಮೆಂಟ್ ನೀಡುತ್ತೀರಾ? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿ ಕಾರಿದರು.
ಹಿಂದೂ ದ್ರೋಹಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಬೇಕು – ಪ್ರಮೋದ್ ಮುತಾಲಿಕ್ !
ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ತುಷ್ಟಿಕರಣ ನೀತಿಯಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿ ಹಾಯ್ದರು.
ನೇಹಾಳಂತಹ ಹೆಣ್ಣು ಮಗಳ ಹತ್ಯೆ ವಿಚಾರದಲ್ಲೂ ಲಘು ಹೇಳಿಕೆ ಕೊಡುವುದು ಸರಿಯಲ್ಲ. ಮುಖ್ಯಮಂತ್ರಿಗಳೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಂದು ಆಗ್ರಹಿಸಿದರು.
ಘೋರ ಅನ್ಯಾಯ: ಹುಬ್ಬಳ್ಳಿಯ ಕಾಲೇಜ್ ಕ್ಯಾಂಪಸ್ ಅಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕಾರಣದಲ್ಲಿ ಮುಖ್ಯಮಂತ್ರಿ ಯಾವುದೇ ರೀತಿ ಜವಾಬ್ದಾರಿ ತೆಗೆದುಕೊಳ್ಳದೆ ಆಕೆ ಕುಟುಂಬ ಮತ್ತು ಸಮಾಜಕ್ಕೆ ಘೋರವಾದಂಥ ಅನ್ಯಾಯ ಮಾಡಿದ್ದಾರೆ ಎಂದು ಖಂಡಿಸಿದರು.
ತಮ್ಮದೇ ಪಕ್ಷದ ಕಾರ್ಪೋರೇಟರ್ ಮಗಳಿಗೇ ಇಂಥ ದುಸ್ಥಿತಿ ಆಗಿದೆ. ನೇಹಾಳ ಹತ್ಯೆ ಹಿಂದೆ ಇನ್ನೂ ಕೆಲವರಿದ್ದಾರೆ ಎಂದು ಆಕೆ ತಂದೆಯೇ ಹೇಳಿದ್ದಾರೆ. ಹಾಗಿದ್ದರೂ ಲಘು ಹೇಳಿಕೆ ನೀಡುತ್ತಿದ್ದೀರಿ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ತನಿಖೆ ನಡೆಸದೆ ಫ್ರೀ ಜಡ್ಜ್ ಮಾಡುವುದು ಸರ್ಕಾರದ ವೋಟ್ ಬ್ಯಾಂಕ್ ರಾಜಕಾರಣ ಮತ್ತು ತುಷ್ಟಿಕರಣದ ಪರಮಾವಧಿ ಎಂದು ಖಂಡಿಸಿದರು.
ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಇಬ್ಬರೂ ನೇಹಾ ಹತ್ಯೆ ವೈಯಕ್ತಿಕ ಕಾರಣಕ್ಕೆ ಎಂದು ಹೇಳಿದ್ದಾರೆ. ಯಾವ ಆಧಾರದ ಮೇಲೆ ಹೀಗೆ ಫ್ರೀ ಜಡ್ಜ್ ಮಾಡುತ್ತೀರಿ? ಎಂದು ಪ್ರಶ್ನಿಸಿದರು.
ಈ ಹಿಂದಿನ ಘಟನೆಗಳಲ್ಲೂ ಹೀಗೇ ಆಗಿದೆ. ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿಯೇ ಇಲ್ಲ ಅಂದ್ರು. ಬೆಂಗಳೂರಿನ ರಾಮೇಶ್ವರ ಕೆಫೇ ಸ್ಫೋಟಕ್ಕೂ ಸಿಲೆಂಡರ್ ಸ್ಫೋಟ, ವ್ಯವಹಾರಿಕ ವೈಷಮ್ಯ ಎಂಬ ಬಣ್ಣ ಬಳಿದರು. ಹನುಮಾನ್ ಚಾಲೀಸ್ ಹಾಕಿದವರ ಮೇಲೆ, ಜೈ ಶ್ರೀರಾಮ್ ಘೋಷಣೆ ಕೂಗಿದರೆ FIR ಹಾಕುತ್ತಾರೆ ಎಂದು ಸಚಿವ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.