ಕನ್ನಡದ ಹೆಸರಾಂತ ನಟ ದರ್ಶನ್ (Darshan) ಅವರ ಸಿನಿಮಾರಿಲೀಸ್ ಆಗುವ ವೇಳೆಯಲ್ಲೇ ಬೇಕು ಅಂತಾನೇ ಕೆಲವರು ನೆಗೆಟಿವ್ ಟ್ರೋಲ್ (Troll) ಮಾಡುತ್ತಾರೆ. ಈ ಬಾರಿಯೂ ಕಾಟೇರ (Katera)ಕುರಿತಾಗಿ ಟ್ರೋಲ್ ಮಾಡಲಾಗುತ್ತಿದೆ. ಈ ಕುರಿತಂತೆ ದರ್ಶನ್ ಫ್ಯಾನ್ಸ್ ಗರಂ ಆಗಿದ್ದಾರೆ. ನೆಗೆಟಿವ್ ಟ್ರೋಲ್ ಮಾಡುವವರನ್ನು ಹುಡುಕುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ ಕುರಿತಂತೆ ದರ್ಶನ್ ಮೊನ್ನೆಯಷ್ಟೇ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದಾರೆ. ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಅಪ್ಪಟ ಕನ್ನಡ ಸಿನಿಮಾ. ನಮ್ಮ ನೆಲದಲ್ಲಿ ಬೇರೆ ಸಿನಿಮಾಗಳು ರಿಲೀಸ್ ಆಗೋಕೆ ಭಯ ಪಡಬೇಕು. ನಾವೇಕೆ ಭಯ ಪಡಬೇಕು ಎಂದೆಲ್ಲ ಮಾತನಾಡಿದ್ದಾರೆ. ಈ ಕುರಿತಂತೆಯೂ ಟ್ರೋಲ್ ಮಾಡಲಾಗುತ್ತಿದೆ.
ನಾನಾ ಕಾರಣಗಳಿಂದಾಗಿ ಕಾಟೇರ ಸಿನಿಮಾ ನಿರೀಕ್ಷೆ ಮೂಡಿಸಿದೆ. ಇವತ್ತು ಸಿನಿಮಾದ ಟ್ರೈಲರ್ ಕೂಡ ಬಿಡುಗಡೆ ಆಗುತ್ತಿದೆ. ಅದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ಹೊಸ ಬಗೆಯ ಪಾತ್ರ ಮಾಡಿದ್ದು, ಆ ಪಾತ್ರವನ್ನು ನೋಡಲು ನೋಡುಗರು ಕಾಯುತ್ತಿದ್ದಾರೆ.