ಒಸ್ಟ್ರಾವಾ: ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ಶಿಪ್ಗಳಲ್ಲಿ ಚಿನ್ನದ ಪದಕ ವಿಜೇತ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ, ಗಾಯದ ಸಮಸ್ಯೆಯಿಂದ ಜೆಕ್ ರಿಪಬ್ಲಿಕ್ನಲ್ಲಿ ನಡೆದ ಒಸ್ಟ್ರಾವಾ ಗೋಲ್ಡನ್ ಸ್ಪೈಕ್-2024 ಅಥ್ಲೆಟಿಕ್ಸ್ ಮೀಟ್ನಿಂದ ಹಿಂದೆ ಸರಿದಿದ್ದಾರೆ.
ಕೆಲವು ವಾರಗಳ ಹಿಂದೆ ತರಬೇತಿಯ ಸಮಯದಲ್ಲಿ ಚೋಪ್ರಾ ಸ್ನಾಯುವಿನ ಗಾಯದಿಂದ ಬಳಲುತ್ತಿದ್ದರು. ಇದರ ಪರಿಣಾಮವಾಗಿ ಅವರು ಅಥ್ಲೆಟಿಕ್ಸ್ ಕೂಟದಿಂದ ಹಿಂದೆ ಸರಿದಿದ್ದಾರೆ. ಆದರೆ, ಮಂಗಳವಾರ ನಡೆಯಲಿರುವ ವಾರ್ಷಿಕ ಅಥ್ಲೆಟಿಕ್ಸ್ ಸ್ಪರ್ಧೆಯ 63ನೇ ಆವೃತ್ತಿಗೆ ಭಾರತದ ಜಾವೆಲಿನ್ ಥ್ರೋ ಅಥ್ಲೀಟ್ ಅತಿಥಿಯಾಗಿ ಹಾಜರಾಗಲಿದ್ದಾರೆ.
BBMP Recruitment 2024: ಬಿಬಿಎಂಪಿಯಲ್ಲಿ 11 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿ..! ಇಂದೇ ಅರ್ಜಿ ಸಲ್ಲಿಸಿ
ಒಸ್ಟ್ರಾವಾ ಗೋಲ್ಡನ್ ಸ್ಪೈಕ್ನಿಂದ ಸತತ ಎರಡನೇ ಬಾರಿ ನೀರಜ್ ಚೋಪ್ರಾ ಹೊರಬಂದಿದ್ದಾರೆ. ಕಳೆದ ವರ್ಷವೂ ಅವರು ಸ್ಪರ್ಧಿಸಿದ್ದರು. ಆದರೆ ಸ್ನಾಯುವಿನ ಗಾಯದಿಂದಾಗಿ ಹೊರನಡೆದಿದ್ದರು. ಪ್ಯಾರಿಸ್ ಒಲಿಂಪಿಕ್ಸ್-2024 ಸಮೀಪಿಸುತ್ತಿದೆ. ಇದಕ್ಕೂ ಮೊದಲು ನೀರಜ್ ಮೇ 11 ರಂದು ದೋಹಾ ಡೈಮಂಡ್ ಲೀಗ್ನಲ್ಲಿ ಸ್ಪರ್ಧಿಸಿದ್ದರು.
88.36 ಮೀ ಎಸೆಯುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇತ್ತೀಚೆಗೆ, ಚೋಪ್ರಾ ಭುವನೇಶ್ವರದಲ್ಲಿ ನಡೆದ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಮೀಟ್ನಲ್ಲಿ ಸ್ಪರ್ಧಿಸಿದ್ದರು. 2021 ರಿಂದ ಭಾರತದಲ್ಲಿ ಅವರ ಮೊದಲ ಸ್ಪರ್ಧಾತ್ಮಕ ಔಟಿಂಗ್ನಲ್ಲಿ ಚಿನ್ನದ ಪದಕವನ್ನು ಗೆದ್ದರು. ಏಸ್ ಜಾವೆಲಿನ್ ಥ್ರೋವರ್ ಕಳಿಂಗ ಸ್ಟೇಡಿಯಂನಲ್ಲಿ 82.27 ಮೀಟರ್ ಜಾವೆಲಿನ್ ಎಸೆದು ಮನು ಡಿಪಿ ಅವರನ್ನು ಸೋಲಿಸಿದರು.