ಬೆಂಗಳೂರು: ಡಿ.ಕೆ.ಸುರೇಶ್ ತಂಗಿ ಎಂದು ನಂಬಿಸಿ ಬರೋಬ್ಬರಿ 14 ಕೆಜಿ ಚಿನ್ನ ವಂಚನೆ ಮಾಡಿದ ಆರೋಪ ಹೊತ್ತಿರುವ ಐಶ್ವರ್ಯ ಗೌಡ ಪತಿ ಹರೀಶ್ ಗೌಡ ನನ್ನು ಚಂದ್ರಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ ನಟ ಧಮೇಂದ್ರ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಸದ್ಯ ಬಂಧಿತ ಐಶ್ವರ್ಯ ಗೌಡ, ಪತಿ ಹರೀಶ್ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ಗೆ ಕರೆದೊಯ್ಯಲಾಗಿದೆ.
Dr.Manmohan Singh: ಲೋಕಸಭೆ ಚುನಾವಣೆಯಲ್ಲಿ ಗೆಲ್ಲದಿದ್ರೂ 2 ಬಾರಿ ಪ್ರಧಾನಿಯಾದ ಮನಮೋಹನ ಸಿಂಗ್!
ವೈದ್ಯಕೀಯ ಪರೀಕ್ಷೆ ಮುಕ್ತಾಯಗೊಂಡ ಬಳಿಕ 4ನೇ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. ಐಶ್ವರ್ಯಗೌಡರನ್ನ ಕಸ್ಟಡಿಗೆ ನೀಡುವಂತೆ ಕೇಳಲು ರಿಮಾಂಡ್ ಅಪ್ಲಿಕೇಷನ್ ಸಹ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಐಶ್ವರ್ಯ ಗೌಡ, ಪತಿ ಹರೀಶ್, ನಟ ಧರ್ಮೇಂದ್ರ ವಿರುದ್ಧ ಕೇಸ್ ದಾಖಲಿಸಿದ್ದ ವನಿತಾ ಐತಾಳ್ ಅವರು ಆರೋಪಿಗಳು ವಾರಾಹಿ ಜ್ಯುವೆಲ್ಲರ್ಸ್ನಲ್ಲಿ 14 ಕೆ.ಜಿ 660 ಗ್ರಾಂ ಚಿನ್ನಾಭರಣ ಖರೀದಿಸಿದ ದಾಖಲೆಯನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರೆ ವನಿತಾ ಐತಾಳ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಮುಗಿಸಿ ಹೊರ ಬಂಧ ದೂರುದಾರೆ ವನಿತಾ ಅವರು ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಐಶ್ವರ್ಯಗೌಡ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಕರೆದಿದ್ರು, ನಾನು ಅವರ ವಿರುದ್ಧ 8.41 ಕೋಟಿ ಮೌಲ್ಯದ 14 ಕೆಜಿ ಚಿನ್ನ ವಂಚನೆ ಕೇಸ್ ದಾಖಲು ಮಾಡಿದ್ದೀನಿ. ಸೂಕ್ತ ದಾಖಲೆಗಳನ್ನು, ವಾಯ್ಸ್ ರೆಕಾರ್ಡ್ಗಳನ್ನು ಪೊಲೀಸರಿಗೆ ಕೊಟ್ಟಿದೇನೆ ಎಂದರು.