ಚಿಕ್ಕಮಗಳೂರು: ಕಳೆದ ಕೆಲ ದಿನಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಮತ್ತೆ ನಕ್ಸಲರ ಓಡಾಟದ ಬಗ್ಗೆ ಮಾಹಿತಿ ದೊರೆತಿತ್ತು. ಇದೀಗ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮತ್ತೆ ನಕ್ಸಲರ ಸದ್ದು ಕೇಳಿಬಂದಿದ್ದು, ಕೊಪ್ಪ ತಾಲೂಕಿನ ಮೇಗೂರು ಸಮೀಪದ ಕುಗ್ರಾಮ ಯಡಗುಂದದ ಇಬ್ಬರು ಯುವಕರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಡಾಗ್ ಸ್ಕ್ವಾಡ್ ಜೊತೆ ಎಎನ್ಎಫ್ ಸಿಬ್ಬಂದಿ ಕಾಡಲ್ಲಿ ನಕ್ಸಲ್ ಹೆಜ್ಜೆ ಹುಡುಕುತ್ತಿದ್ದಾರೆ.
Recruitment 2024: SSLC ಪಾಸಾದವರಿಗೆ “NABARD”ನಲ್ಲಿದೆ ಭರ್ಜರಿ ಉದ್ಯೋಗವಕಾಶ! ತಿಂಗಳಿಗೆ 35,000 ರೂ. ಸಂಬಳ!
ವಶಕ್ಕೆ ಪಡೆಯಲಾದ ಇಬ್ಬರು ಯುವಕರು ಬೆಂಗಳೂರಿಗೆ ಕೇರಳದಿಂದ ಬಂದಿದ್ದ ಹಾರ್ಡ್ ಕೋರ್ ನಕ್ಸಲ್ ನಾಯಕಿ ಮುಂಡಗಾರು ಲತಾಳಿಗೆ ಸಂಬಂಧಪಟ್ಟ ಪತ್ರವನ್ನ ತರಲು ಹೋಗಿದ್ದರು ಎನ್ನಲಾಗಿದೆ. ಇನ್ನೂ ಶೃಂಗೇರಿ, ಕೊಪ್ಪ ಹಾಗೂ ಕಳಸ ತಾಲೂಕಿನಲ್ಲಿ ವ್ಯಾಪಿಸಿಕೊಂಡಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಎಎನ್ಎಫ್ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.