ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಖಿ ದಾಂಪತ್ಯ ಜೀವನ ಬೀದಿಗೆ ಬಂದಿತ್ತು. ಸಿದ್ದಿಖಿ ಪತ್ನಿ ಆಲಿಯಾ ಪತಿಯ ವಿರುದ್ಧ ಹತ್ತಾರು ಆರೋಪ ಹೊರಿಸಿದ್ದರು. ವರದಕ್ಷಿಣೆ ಕಿರುಕುಳ ನೀಡಿ ತನ್ನನ್ನು ಪತಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಈ ಜೋಡಿ ಮತ್ತೆ ಒಂದಾಗಿದೆ. ಈ ಮೂಲಕ ಹಳೆಯದೆಲ್ಲವನ್ನು ಮರೆತು ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೇಟ್ ಮಾಡಿದ್ದಾರೆ.
ಅಂದ ಹಾಗೆ ನವಾಜುದ್ದೀನ್ ಸಿದ್ದಿಖಿ ಹಾಗೂ ಆಲಿಯಾ ತಮ್ಮ ಮಕ್ಕಳಿಗಾಗಿ ಮತ್ತೆ ಒಂದಾಗಿದ್ದಾರೆ. ಕೆಲವು ದಿನಗಳ ಹಿಂದೆ ಆಲಿಯಾ ಸಿದ್ದಿಖಿ ಮತ್ತು ನವಾಜುದ್ದೀನ್ ಸಿದ್ದಿಖಿ ಜೊತೆಯಾಗಿ ಕಾಣಿಸಿಕೊಂಡ ಫೋಟೋ ವೈರಲ್ ಆಗಿತ್ತು. ಇಷ್ಟು ದಿನ ಪರಸ್ಪರ ಕಿತ್ತಾಡಿಕೊಂಡು, ಸಂಸಾರದ ಜಗಳವನ್ನು ಬೀದಿಗೆ ತಂದಿದ್ದ ಜೋಡಿ ಈಗ ಮತ್ತೆ ಒಂದಾಗಿದ್ದಾರೆ ಎಂಬುದಕ್ಕೆ ಆ ಫೋಟೋ ಸಾಕ್ಷಿ ಆಗಿತ್ತು. ಆ ಕುರಿತು ಮಾಧ್ಯಮವೊಂದಕ್ಕೆ ಆಲಿಯಾ ಸಿದ್ದಿಖಿ ಪ್ರತಿಕ್ರಿಯೆ ನೀಡಿದ್ದಾರೆ.
‘ಮೂರನೇ ವ್ಯಕ್ತಿಯಿಂದಾಗಿ ನಾವು ಯಾವಾಗಲೂ ಸಮಸ್ಯೆ ಅನುಭವಿಸಿದೆವು ಅನಿಸುತ್ತದೆ. ಈಗ ನಮ್ಮ ಬದುಕಿನಲ್ಲಿ ತಪ್ಪು ತಿಳಿವಳಿಕೆ ಇಲ್ಲ. ನಮ್ಮ ಮಕ್ಕಳ ಸಲುವಾಗಿ ನಾವು ಸಂಪೂರ್ಣ ಶರಣಾಗಿದ್ದೇವೆ. ಬದುಕಿನಲ್ಲಿ ಈಗ ಬೇರಾಗುವ ಮಾತೇ ಇಲ್ಲ. ಯಾಕೆಂದರೆ ಮಕ್ಕಳು ಈಗ ದೊಡ್ಡವರಾಗಿದ್ದಾರೆ. ಮಗಳು ಶೋರಾಗೆ ನವಾಜ್ ತುಂಬಾ ಹತ್ತಿರವಾಗಿದ್ದಾರೆ. ನಮ್ಮ ನಡುವೆ ಜಗಳ ಆದಾಗ ಆಕೆ ತುಂಬ ಡಿಸ್ಟರ್ಬ್ ಆಗಿದ್ದಳು. ಅದನ್ನೆಲ್ಲ ಅವಳಿಕೆ ಸಹಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ಇನ್ಮೇಲೆ ಜಗಳ ಮಾಡೋದ ಬೇಡ. ಒಟ್ಟಾಗಿ, ಶಾಂತಿಯಿಂದ ಜೀವನ ಮಾಡೋಣ ಅಂತ ನಿರ್ಧರಿಸಿದೆವು’ ಎಂದು ಆಲಿಯಾ ಸಿದ್ದಿಖಿ ಹೇಳಿದ್ದಾರೆ.
ಬಾಲಿವುಡ್ನಲ್ಲಿ ನಟ ನವಾಜುದ್ದೀನ್ ಸಿದ್ದಿಖಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಪತ್ನಿ ಮಾಡಿದ ಆರೋಪಗಳಿಂದ ಅವರ ಹೆಸರಿಗೆ ಕಳಂಕ ಬಂದಿತ್ತು. ‘ನಮ್ಮನ್ನು ಮನೆಯಿಂದ ಹೊರಗೆ ಹಾಕಿದ್ದಾರೆ’ ಎಂದು ಕೂಡ ಆಲಿಯಾ ಆರೋಪಿಸಿದ್ದರು. ವಿಚ್ಛೇದನ ಪಡೆಯುವ ಮಟ್ಟಕ್ಕೆ ಅವರ ಜಗಳ ತಲುಪಿತ್ತು. ಆದರೆ ಈಗ ಅವರಿಬ್ಬರು ಒಂದಾಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಆಲಿಯಾ ಮತ್ತು ನವಾಜುದ್ದೀನ್ ಮದುವೆ ಆಗಿ 14 ವರ್ಷಗಳು ಕಳೆದಿವೆ.