ನವರಾತ್ರಿಯ ಒಂಬತ್ತನೇ ದಿನ ಬಹಳ ವಿಶೇಷವಾಗಿದೆ. ಯಾಕೆಂದರೆ ಈ ದಿನವು 9 ದಿನಗಳ ನವರಾತ್ರಿಯ ಕೊನೆಯ ದಿನವಾಗಿ ಗುರುತಿಸಿಕೊಳ್ಳುತ್ತದೆ. ಈ ದಿನದಂದು ಅನೇಕ ಜನರು ಕನ್ಯಾ ಪೂಜೆ ಮತ್ತು ಹವನ ಪೂಜೆ ಮಾಡುತ್ತಾರೆ. ಒಂಬತ್ತನೇ ನವರಾತ್ರಿಯಲ್ಲಿ, ಭಕ್ತರು ದುರ್ಗಾ ದೇವಿಯ ಸಿದ್ಧಿದಾತ್ರಿ ರೂಪವನ್ನು ಪೂಜಿಸುತ್ತಾರೆ. ತಾಯಿಯ ಈ ರೂಪವನ್ನು ಪೂಜಿಸುವುದರಿಂದ ಜೀವನದಲ್ಲಿ ಎಲ್ಲಾ ಅಂಧಕಾರಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ನವರಾತ್ರಿಯ ಕೊನೆಯ ದಿನವನ್ನು ಮಹಾನವಮಿ, ದುರ್ಗಾ ನವಮಿ ಎಂದೂ ಕರೆಯಲಾಗುತ್ತದೆ. 2024ರ ಮಹಾನವಮಿ ಕುರಿತು ಒಂದಿಷ್ಟು ಮಾಹಿತಿ ಹೀಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ಅನುಮಾನ..!
ಸಿದ್ಧಿದಾತ್ರೀ ದೇವಿಯ ಸ್ವರೂಪ:
ಆ ದೇವಿಗೆ ನಾಲ್ಕು ಭುಜಗಳು. ಆಕೆಯ ವಾಹನ ಸಿಂಹ. ಈಕೆ ಕಮಲದ ಹೂವಿನ ಮೇಲೆ ಕುಳಿತಿದ್ದಾಳೆ. ತಾಯಿಯ ಕೆಳಗಿನ ಬಲಗೈಯಲ್ಲಿ ಚಕ್ರವಿದೆ, ಮೇಲಿನದರಲ್ಲಿ ಗದೆ ಇದೆ. ಎಡಗಡೆಯ ಕೆಳಗಿನ ಕೈಯಲ್ಲಿ ಶಂಖ ಹಿಡಿದಿದ್ದರೆ, ಮೇಲಿನ ಕೈಯಲ್ಲಿ ಕಮಲದ ಹೂವಿದೆ. ಯಾವ ವ್ಯಕ್ತಿಯು ಶರನ್ನವರಾತ್ರಿಯ ಒಂಬತ್ತನೇ ದಿನದಂದು ಈ ಸಿದ್ಧಿ ದಾತ್ರೀ ದೇವಿಯ ಆರಾಧನೆ ಮಾಡುತ್ತಾರೋ ಅಂಥವರಿಗೆ ಎಲ್ಲ ಸಿದ್ಧಿಗಳನ್ನು ಆ ತಾಯಿಯು ಅನುಗ್ರಹಿಸುತ್ತಾಳೆ. ಈ ಸೃಷ್ಟಿಯಲ್ಲಿ ಆ ವ್ಯಕ್ತಿಗೆ ನಿಲುಕಲಾರದ್ದು ಎಂಬುದು ಯಾವುದೂ ಇರುವುದಿಲ್ಲ.
ನವರಾತ್ರಿಯಲ್ಲಿ ದೇವಿಯ ಒಂಬತ್ತು ಸ್ವರೂಪಗಳನ್ನು ವಿವರಿಸುತ್ತಾ ಕೊನೆಯದಾಗಿ ಬರುವುದು ಸಿದ್ಧಿದಾತ್ರೀ ದೇವಿ ಸ್ವರೂಪವಾಗಿದೆ. ಉಳಿದ ಎಂಟು ದಿನಗಳಂತೆ ಒಂಬತ್ತನೇ ದಿನದಂದು ಸಹ ಈ ದೇವಿಯ ಆರಾಧನೆ ಮಾಡುವುದರಿಂದ ಆರಾಧಕರ ಲೌಕಿಕ- ಪಾರಮಾರ್ಥಿಕ ಎಲ್ಲ ಬಗೆಯ ಕೋರಿಕೆಗಳು ನೆರವೇರುತ್ತವೆ. ಆ ಭಗವತಿ ಸಿದ್ಧಿದಾತ್ರೀ ದೇವಿ ಅನುಗ್ರಹಿಸಿದ ಮೇಲೆ ಬೇರೆ ಯಾವ ಕೃಪೆ, ಅನುಗ್ರಹ, ರಕ್ಷಣೆಯ ಅಗತ್ಯವು ಸಹ ಆ ಆರಾಧಕರಿಗೆ ಅಗತ್ಯ ಇರುವುದಿಲ್ಲ.
ಈ ವರ್ಷ ಮಹಾನವಮಿಯನ್ನು 2024 ರ ಅಕ್ಟೋಬರ್ 11 ರಂದು ಆಚರಿಸಲಾಗುತ್ತದೆ. ನವಮಿ ತಿಥಿಯು ಅಕ್ಟೋಬರ್ 11 ರಂದು ಮಧ್ಯಾಹ್ನ 12:06 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 12 ರಂದು ರಾತ್ರಿ 10:58 ಕ್ಕೆ ಕೊನೆಗೊಳ್ಳುತ್ತದೆ.
– ಸಾಮಾನ್ಯ ಮುಹೂರ್ತ: ಮುಂಜಾನೆ 06:20 ರಿಂದ 07:47
– ಲಾಭ ಮುಹೂರ್ತ: ಬೆಳಗ್ಗೆ 07:47 ರಿಂದ 09:14
– ಅಮೃತ ಕಾಲ: ಬೆಳಗ್ಗೆ 09:14 ರಿಂದ 10:41
– ಶುಭ ಮುಹೂರ್ತ: ಮಧ್ಯಾಹ್ನ 12:08 ರಿಂದ 01:34