ಹುಬ್ಬಳ್ಳಿ: ತಾಲೂಕಿನ ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರ ವರೆಗೆ 2ನೇ ಬಾರಿಗೆ ಶ್ರವಣಬೆಳಗೊಳ ಮಾದರಿಯಲ್ಲಿ ಮಹಾಮಸ್ತಕಾಭಿಷೇಕ ಆಯೋಜಿಸಲಾಗಿದೆ ಎಂದು ಗುಣಧರನಂದಿ ಮಹಾರಾಜರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಜ. 15ರಂದು ರಾಜ್ಯಪಾಲ ತಾವರಚಂದ ಗೆಹ್ಲೋಟ್, 16ರಂದು ಉಪರಾಷ್ಟ್ರಪತಿ ಜಗದೀಪ್ ಧನಕರ್, 17ರಂದು ಗಾಯಕ ವಿಜಯ ಪ್ರಕಾಶ, ಸುರೇಶ ವಾಡಕರ, 18ರಂದು ನಟ ರಮೇಶ ಅರವಿಂದ, 19ಮತ್ತು 20ರಂದು ಧಾರ್ಮಿಕ ಕಾರ್ಯಕ್ರಮ, 21ರಂದು ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ.
ಹುಷಾರ್ ಜನರೇ: ವರ್ಕ್ ಫ್ರಮ್ ಹೋಂ ಕೆಲಸದ ಹೆಸರಿನಲ್ಲಿ ನಡೆಯುತ್ತಿದೆ ವಂಚನೆ!
22ರಂದು ರಾಜೇಶ ಕೃಷ್ಣನ್ ಆಗಮಿಸಲಿದ್ದಾರೆ. 23ರಂದು ಮುಂಜಿ, ವ್ರತ ಬಂಧನ ಮತ್ತು ಮಂತ್ರ ಸಂಸ್ಕಾರ, 24ರಂದು ಜೈನ ಸಾಹಿತ್ಯ ಸಮ್ಮೇಳನ, ಮಹಾಮಸ್ತಕಾಭಿಷೇಕ, 25ರಂದು ಭಟ್ಟಾರಕರು, ಇಂದ್ರ ಕಲ್ಯಾಣಭಿಷೇಕ, 26ರಂದು ವಿಶ್ವಾಮಿತ್ರ 9909 ಹವನ, ಒಂಭತ್ತು ಪ್ರತಿಷ್ಠಾನ ಆಚಾರ್ಯರು ಇರಲಿದ್ದಾರೆ ಎಂದು ತಿಳಿಸಿದರು.
ಜ.22ರಿಂದ 24ರ ವರೆಗೆ ಹೆಲಿಕಾಪ್ಟರ್ ಮೂಲಕ ಮೇರುಪರ್ವತಕ್ಕೆ ಪುಷ್ಪಾರ್ಚನೆ ನಡೆಯಲಿದೆ. ಅಮೆರಿಕದಿಂದ 150 ಜನರು ಹಾಗೂ ದೇಶದ ವಿವಿಧ ರಾಜ್ಯಗಳ ಸಂತರು, ಗಣ್ಯಾತಿಗಣ್ಯರು, ರಾಜಕಾರಣಿಗಳು, ಸಂಗೀತಗಾರರು, ಕಲಾವಿದರು ಹಾಗೂ ಪ್ರಪಂಚದ ವಿವಿಧ ದೇಶಗಳ ಗಣ್ಯರು ಆಗಮಿಸುತ್ತಿದ್ದಾರೆ. ಸರ್ವಧರ್ಮದವರು ಪಾಲ್ಗೊಳ್ಳುತ್ತಿದ್ದಾರೆ. ಮಹಾಮಸ್ತಕಾಭಿಷೇಕದಲ್ಲಿ ಐದು ಸಾವಿರ ಮಹಿಳೆಯರು ಸ್ವಯಂ ಸೇವಕರಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.