ಬಾಗಲಕೋಟೆ: ತಲೆಸುಡುವ ಬಿಸಿಲ ನಡುವೆ ಕೃಷ್ಣಾ ನದಿ ನೀರು ಗಣನೀಯ ಪ್ರಮಾಣ ಖಾಲಿಯಾಗುತ್ತಿದೆ. ಗ್ರಾಮೀಣ ಭಾಗದ ಕೆರೆ, ಬಾವಿ, ಕೊಳವೆಬಾವಿಗಳು ಬತ್ತುತ್ತಿವೆ. ಹೀಗಾಗಿ ಹಳ್ಳಿಗಳಲ್ಲಿ ನೀರಿಗಾಗಿ ಪರದಾಟ ಪ್ರಾರಂಭವಾಗಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತಾಲೂಕಿನ ಯಲ್ಲಟ್ಟಿ ಗ್ರಾಮದ ವಾರ್ಡ ೫ ರ ಸೀಮಿ ಲಕ್ಕವ್ವ ಗುಡಿ ಬಳಿಯಲ್ಲಿ ಕಳೆದ ಸುಮಾರು 30 ವರ್ಷಗಳಿಂದ ವಸತಿ ಜನರು ವಾಸವಾಗಿದ್ದಾರೆ,
ಕೃಷ್ಣಾ ನದಿಯ ನೀರನ್ನು ನಂಬಿಕೊಂಡು ಬದುಕುತ್ತಿರುವ ಜನರ ಪರಿಸ್ಥಿತಿ ಈಗ ಸಂಪೂರ್ಣವಾಗಿದೆ ಬೀಗಡಾಸಿದೆ. ನಮಗೆ ನೀರು ಕೊಡಿ ನಮ್ಮನ್ನು ಬದುಕಿಸಿ ಎಂದು ಜಿಲ್ಲಾಡಳಿತಕ್ಕೆ ನಾರಿ ಮುನಿಗಳು ಬೇಡಿಕೊಳ್ಳುತ್ತಿದ್ದಾರೆ. ಸುಮಾರು ವರ್ಷಗಳಿಂದ ಬೋರ್ವೆಲ್ ಮತ್ತು ಇನ್ನಿತರ ನೀರಿನ ವ್ಯವಸ್ಥೆ ಮಾಡದೆ ಇರುವ ಅಧಿಕಾರಿಗಳ ವಿರುದ್ಧ ನಾರಿ ಮುನಿಗಳು ಹರಿಹರಿದ್ದಾರೆ.
ಚುನಾವಣೆ ಬಂದಾಗ ನಮ್ಮ ಮತ ಬೇಕು ಆದರೆ ನಮಗೆ ಕುಡಿಯಲು ನೀರು ಕೊಡುವವರು ಯಾರು ಇಲ್ಲದಂತಾಗಿದೆ. ಕೂಡಲೆ ಅಧಿಕಾರಿಗಳು ಎಚ್ಚೆತ್ತುಕೊಂಡು ನಮಗೆ ನೀರು ಪೂರೈಕೆ ಮಾಡದೇ ಇದ್ದರೆ ಖಾಲಿ ಕೂಡ ತೆಗೆದುಕೊಂಡು ಜಿಲ್ಲಾ ಆಡಳಿತ ಭವನದ ಮುಂದೆ ಪ್ರದರ್ಶನ ಮಾಡಲಾಗುವುದೆಂದು ನಾರಿ ಮನೆಗಳು ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ