ಬಳ್ಳಾರಿ:– ಶಾಸಕ ನಾರಾ ಭರತ್ ರೆಡ್ಡಿ ಹಾಗೂ ನಮ್ಮ ಮಧ್ಯೆ ಬೆಂಕಿ ಹಚ್ಚುವ ಕೆಲಸ ಬೇಡ ಎಂದು ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ಈ ಸಂಬಂಧ ಬಳ್ಳಾರಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಈ ಅವದಿಯಲ್ಲಿ, ಮುಂದಿನ ಅವಧಿಯಲ್ಲೂ ಕಾಂಗ್ರೆಸ್ ಆಡಳಿತ ನಡೆಸಲಿದೆ. ಈ ವಿಚಾರದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ನಮ್ಮ ಮಧ್ಯೆ ಬೆಂಕಿ ಹಚ್ಚುವ ಕೆಲಸ ಬೇಡ. ನಾವಿಬ್ಬರೂ ಅಣ್ಣ ತಮ್ಮಂದಿರಂತೆ ಇದ್ದೇವೆ, ನಮ್ಮಿಬ್ಬರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಬೇಡ ಎಂದು ಸಚಿವ ಬಿ.ನಾಗೇಂದ್ರ ಸಿಡಿಮಿಡಿಗೊಂಡಿದ್ದಾರೆ.
ಮೇಯರ್ ಆಯ್ಕೆ ವಿಚಾರದಲ್ಲಿ ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಗೊಂದಲಗಳಿಲ್ಲ, ಪ್ರಾದೇಶಿಕ ಆಯುಕ್ತರು ನಾನಾ ಕಾರಣಗಳಿಂದ ಬರಲು ಸಾಧ್ಯವಾಗಿಲ್ಲ, ಹಿನ್ನೆಲೆ ಮೇಯರ್ ಚುನಾವಣೆಯನ್ನು ಡಿ.19ಕ್ಕೆ ಮುಂದೂಡಲಾಗಿದೆ. ಈ ವಿಚಾರವನ್ನು ನಗರ ಶಾಸಕ ನಾರಾ ಭರತ್ ರೆಡ್ಡಿ ಬಣ, ಸಚಿವ ಬಿ.ನಾಗೇಂದ್ರ ಬಣ ಎಂದು ನಮ್ಮನಮ್ಮಲ್ಲೇ ಬೆಂಕಿ ಹಚ್ಚುವ ಕೆಲಸ ಬೇಡ, ನಮ್ಮಲ್ಲಿ ಯಾವುದೇ ಬಣಗಳಿಲ್ಲ, ನಮ್ಮದು ಕಾಂಗ್ರೆಸ್ ಬಣ, ಮೇಯರ್ ಆಯ್ಕೆ ವಿಚಾರದಲ್ಲಿ ಶಾಸಕರು ಸೇರಿದಂತೆ ಪಾಲಿಕೆಯ ನಮ್ಮ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮೇಯರ್ ಚುನಾವಣೆ ನಡೆಸೋದು. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ನಾವೆಲ್ಲರೂ ಅತ್ಯಂತ ವಿಶ್ವಾಸದಿಂದ ಇದ್ದೇವೆ, ನಮ್ಮದೂ ಮೆಯರ್ ಚುನಾವಣೆಯಲ್ಲಿ ಮತಗಳಿವೆ. ಈ ಹಿನ್ನೆಲೆ ನಾನಾ ಕಾರಣಗಳಿಂದ ಚುನಾವಣೆಯನ್ನು ಮುಂದೂಡಲಾಗಿದೆ. ಇದನ್ನೇ ಬಣ ರಾಜಕೀಯ ಎಂದು ಸೃಷ್ಟಿಸುವುದು ಸರಿಯಲ್ಲ, ಬಿಜೆಪಿ ಅವರು ಅಧಿಕಾರಕ್ಕೆ ಅಂಟಿಕೊಂಡವರು, ಅಧಿಕಾರಕ್ಕಾಗಿ ಬಿಜೆಪಿ ಅವರು ಏನೂ ಮಾಡಲು ಸಿದ್ದ,
ಕುತಂತ್ರ ಬುದ್ದಿಯನ್ನು ಅನುಸರಿಸಲು ಮುಂದಾಗಿದ್ದಾರೆ ಅವರ ಆಟ ನಡೆಯೋಲ್ಲ, ಬಳ್ಳಾರಿ ಮಹಾನಗರ ಪಾಲಿಕೆ ಕಾಂಗ್ರೆಸ್ ಆಡಳಿತ ನಡೆಸಲಿದೆ. ಇದರಲ್ಲಿ ಯಾವುದೇ ಅನುಮಾನವೇ ಬೇಡ ನಾವೇಲ್ಲ ಒಂದೇ ಎಂದು ಸಚಿವರು ಸ್ಪಷ್ಟ ಪಡಿಸಿದ್ದಾರೆ.