ಬೆಂಗಳೂರಿನಲ್ಲಿ ಬಂದಿರೋ ಟಾಲಿವುಡ್ನ ನ್ಯಾಚುರಲ್ ಸ್ಟಾರ್ ನಾನಿ, ನಟ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಶಿವಣ್ಣ ಹಾಗೂ ನಾನಿ ಇಬ್ಬರೂ ಕೆಲ ಹೊತ್ತು ಪರಸ್ಪರ ಮಾತಾಡಿಕೊಂಡಿದ್ದಾರೆ. ಇತ್ತೀಚೆಗೆ ‘ಹಾಯ್ ನಾನ್ನ’ ಸಿನಿಮಾದ ಎರಡನೇ ಹಾಡನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿ ಶುಭ ಹಾರೈಸಿದ್ದರು.
ಈಗ ಇದೇ ‘ಹಾಯ್ ನಾನ್ನ’ ಸಿನಿಮಾ ಡಿಸೆಂಬರ್ 7ರಂದು ಬಿಡುಗಡೆಗೆ ಸಜ್ಜಾಗಿದೆ.
ಹೀಗಾಗಿ ಬೆಂಗಳೂರಿಗೆ ಪ್ರಚಾರ ಮಾಡುವುದಕ್ಕೆ ಬಂದಿದ್ದಾರೆ.
ಇದೇ ವೇಳೆ ಬೆಂಗಳೂರಿನ ನಾಗಾವರದಲ್ಲಿರುವ ಶಿವಣ್ಣನ ಮನೆಗೆ ಭೇಟಿ ಕೊಟ್ಟು ಕೆಲ ಕಾಲ ಸಮಯ ಕಳೆದಿದ್ದಾರೆ.
ಈ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಜೊತೆಗಿದ್ದರು.