ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರದ ಚಿಮುಲ್ ಡೈರಿಯಲ್ಲಿ ಹಾಲಿಗೆ ನೀರು ಮಿಶ್ರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಡೇರಿ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಚಿಮುಲ್ ವಿಸ್ತರಣಾಧಿಕಾರಿ ಕೆ.ನಾರಾಯಣಸ್ವಾಮಿರನ್ನು ಸಸ್ಪೆಂಡ್ ಮಾಡಲಾಗಿದೆ.
ಖರ್ಗೆ ಅವರೇ ನಕಲಿ ಕಾಂಗ್ರೆಸ್ ಪಕ್ಷದ ನವಾಬರಂತೇಕೆ ವರ್ತಿಸುತ್ತಿದ್ದೀರಿ!? ಜೋಶಿ ವಾಗ್ದಾಳಿ!
ಹೌದು ಇತ್ತೀಚೆಗೆ ಜಿಲ್ಲೆಯ ಚಿಂತಾಮಣಿ ತಾಲೂಕು ಮಾಡಿಕೆರೆ ಗ್ರಾಮದ ಹಾಲಿನ ಬಿ.ಎಂ.ಸಿ ಡೈರಿಯಲ್ಲಿ ಸಿಬ್ಬಂದಿಗಳೇ ರೈತರು ತಂದು ಹಾಕುವ ಹಾಲಿಗೆ ನೀರು ಕಲಬೆರಕೆ ಮಾಡುತ್ತಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಎಂಡಿ ಶ್ರೀನಿವಾಸಗೌಡ ತನಿಖೆಗೆ ಆದೇಶಿಸಿದ್ದರು. ತನಿಖೆಯಲ್ಲಿ ಅಕ್ರಮ ಅವ್ಯವಹಾರ ಬಯಲಾಗಿದ್ದು, ಚಿಮುಲ್ ವಿಸ್ತರಣಾಧಿಕಾರಿ ಕೆ.ನಾರಾಯಣಸ್ವಾಮಿ ಸೇರಿದಂತೆ ಮಾಡಿಕೆರೆ ಹಾಲಿನ ಡೇರಿ ಕಾರ್ಯದರ್ಶಿ, ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಇನ್ನೂ ಚಿಮುಲ್ ಅಧಿಕಾರಿಗಳ ತಂಡ ನಡೆಸಿದ ಸಮಗ್ರ ತನಿಖೆಯಲ್ಲಿ, ರೈತರು ತಂದು ಹಾಕುವ ಪರಿಶುದ್ಧ ಹಾಲಿಗೆ ಇದುವರೆಗೂ ಹತ್ತು ಸಾವಿರದ 182 ಲೀಟರ್ ನೀರು ಬೆರೆಸಿರುವುದು ಬಯಲಾಗಿದೆ. ಇದರ ಮೌಲ್ಯ ಬರೋಬ್ಬರಿ 3,53,376 ರೂ. ಆಗಿದೆ. ಇನ್ನೂ ಹಾಲಿಗೆ ಮಿಶ್ರಣ ಮಾಡಿರುವ ನೀರಿಗೆ ಕ್ಷೀರ ಸಿರಿ ಯೋಜನೆಯಡಿ 50,939 ರೂ. ಪ್ರೋತ್ಸಾಹಧನವನ್ನು ಅಕ್ರಮವಾಗಿ ಪಡೆದುಕೊಂಡಿರುವುದು ಬಯಲಾಗಿದೆ. ಒಟ್ಟು 4,04,675 ರೂ. ಅಕ್ರಮವಾಗಿ ಅನಧಿಕೃತವಾಗಿ ಹಣ ಪಡೆದುಕೊಂಡಿರುವುದು ಬಯಲಾಗಿದೆ.