ನಟ, ಶಾಸಕ ನಂದಮೂರಿ ಬಾಲಕೃಷ್ಣ ನಟನೆಯ ‘ಡಾಕೂ ಮಹಾರಾಜ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್ ನಲ್ಲಿ ಡಾಕೂ ಮಹಾರಾಜ್ ಭರ್ಜರಿ ಕಲೆಕ್ಷನ್ ಮಾಡಿದ್ದು ಇದೇ ಖುಷಿಯಲ್ಲಿ ಸಿನಿಮಾದ ಸಂಗೀತ ನಿರ್ದೇಶಕ ತಮನ್ ಅವರಿಗೆ ಬಾಲಕೃಷ್ಣ ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರೆ.
‘ಡಾಕೂ ಮಹಾರಾಜ್’ ಸಿನಿಮಾ ವಿಶ್ವದಾದ್ಯಂತ ಸುಮಾರು 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಚಿತ್ರತಂಡ ಸಖತ್ ಖುಷಿಲ್ಲಿದ. ಬಾಲಕೃಷ್ಣ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಸಹ ನಿರ್ಮಾಪಕ ಕೂಡ ಹೌದು. ಸಿನಿಮಾ ಸಕ್ಸಸ್ ಆದ ಖುಷಿಯಲ್ಲಿ ಸಿನಿಮಾದ ಯಶಸ್ಸಿಗೆ ಮೂಲ ಕಾರಣಕರ್ತರಲ್ಲಿ ಒಬ್ಬರಾದ ಸಂಗೀತ ನಿರ್ದೇಶಕ ಎಸ್ಎಸ್ ತಮನ್ಗೆ ದುಬಾರಿ ಉಡುಗೊರೆ ನೀಡಿದ್ದಾರೆ.
ಸಂಗೀತ ನಿರ್ದೇಶಕ ಎಸ್ಎಸ್ ತಮನ್ಗೆ ಐಶಾರಾಮಿ ಪೋರ್ಶೆ ಕಾರನ್ನು ನಂದಮೂರಿ ಬಾಲಕೃಷ್ಣ ಉಡುಗೊರೆಯಾಗಿ ನೀಡಿದ್ದಾರೆ. ಎಸ್ಎಸ್ ತಮನ್, ಕಾರುಗಳ ಬಗ್ಗೆ ಕ್ರೇಜ್ ಉಳ್ಳ ವ್ಯಕ್ತಿ. ಇದೇ ಕಾರಣಕ್ಕೆ ನಂದಮೂರಿ ಬಾಲಕೃಷ್ಣ ಇದೀಗ ಎಸ್ಎಸ್ ತಮನ್ಗೆ ಪೋರ್ಶೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಬೆಲೆ ಸುಮಾರು 2 ಕೋಟಿಗೂ ಹೆಚ್ಚು. ‘ಡಾಕೂ ಮಹಾರಾಜ್’ ಸಿನಿಮಾದ ‘ದಬಿಡಿ-ದಿಬಿಡಿ’ ಹಾಡು ಭಾರಿ ವೈರಲ್ ಆಗಿತ್ತು, ಸಿನಿಮಾಕ್ಕೆ ಒಳ್ಳೆಯ ಆರಂಭ ದೊರಕಿಸಿಕೊಡುವಲ್ಲಿ ಈ ಹಾಡು ಪ್ರಮುಖ ಪಾತ್ರವಹಿಸಿತ್ತು. ಅಲ್ಲದೆ ಸಿನಿಮಾದ ಇತರೆ ಹಾಡುಗಳು ಸಹ ಹಿಟ್ ಆಗಿದ್ದವು. ಹಾಗಾಗಿ ಬಾಲಯ್ಯ ತಮನ್ಗೆ ದುಬಾರಿ ಉಡುಗೊರೆ ನೀಡಿದ್ದಾರೆ.
ಅಂದಹಾಗೆ ಬಾಲಯ್ಯ ನಟಿಸಿದ 4 ಚಿತ್ರಗಳಿಗೆ ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೊದಲಿಗೆ ‘ಡಿಕ್ಟೇಟರ್’ ಚಿತ್ರಕ್ಕೆ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ಬಳಿಕ ‘ಅಖಂಡ’ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಆ ಸಿನಿಮಾ ಸಕ್ಸಸ್ನಲ್ಲಿ ಸಂಗೀತದ ಪಾಲು ಇದೆ. ಬಳಿಕ ‘ವೀರಸಿಂಹ ರೆಡ್ಡಿ’ ಹಾಗೂ ‘ಡಾಕು ಮಹಾರಾಜ್’ ಚಿತ್ರಗಳಿಗೆ ತಮನ್ ಟ್ಯೂನ್ ಮಾಡಿದ್ದಾರೆ.
ತಮನ್ ನನ್ನ ಸಹೋದರ ಸಮಾನ. ಇನ್ನು ಮುಂದೆ ಕೂಡ ನಮ್ಮ ಕಾಂಬಿನೇಷನ್ ಮುಂದುವರೆಯುತ್ತದೆ. ಇನ್ನು ಮುಂದೆ ಆತ ನಂದಮೂರಿ ತಮನ್ ಎಂದು ಬಾಲಯ್ಯ ಕೊಂಡಾಡಿದ್ದರು.