ಬಿಗ್ ಬಾಸ್ ನಲ್ಲಿ ಈ ವಾರದ ಟಾಸ್ಕ್ನಲ್ಲಿ ನಮ್ರತಾ ಗೌಡ ಅತ್ಯುತ್ತಮ ಪ್ರದರ್ಶನದ ಮೂಲಕ ಮನೆಯ ಕ್ಯಾಪ್ಟನ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಮ್ರತಾ ಕ್ಯಾಪ್ಟನ್ ಆಗುವಲ್ಲಿ ಪ್ರತಾಪ್ ಅವರ ಪಾತ್ರವೂ ಇದೆ. ತಮ್ಮ ಪಾಲಿನ ಪಾಯಿಂಟ್ಸ್ ಶೇರ್ ಮಾಡಿ ನಮ್ರತಾ ಕ್ಯಾಪ್ಟನ್ಸಿ ರೇಸ್ನಲ್ಲಿ ಉಳಿದುಕೊಳ್ಳುವಂತೆ ಪ್ರತಾಪ್ ಸಹಾಯ ಮಾಡಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ.
ಆದರೆ, ಮನೆಯ ಕ್ಯಾಪ್ಟನ್ ಆಗಿ ದಿನ ಕಳೆಯುವದರೊಳಗೆ ನಮ್ರತಾ ಅವರು ಉಲ್ಟಾ ಹೊಡೆದಂತೆ ಕಾಣುತ್ತಿದ್ದು, ಪ್ರತಾಪ್ ಹಳ್ಳಿಯವರನ್ನು ಸೆಳೆಯಲು ಅಲ್ಲಿಯವರಂತೆ ಮಾತನಾಡುತ್ತಾರೆ ಅನ್ನೋದು ಕೆಲವರ ವಾದವಾಗಿದೆ. ಈ ವಾದಕ್ಕೆ ನಮ್ರತಾ ಕೂಡ ಧ್ವನಿಗೂಡಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನಮ್ರತಾ ಅವರ ಹೇಳಿಕೆ ವೈರಲ್ ಆಗುತ್ತಿದ್ದು, ಪ್ರತಾಪ್ ಬೆನ್ನಿಗೆ ನಮ್ರತಾ ಚಾಕು ಹಾಕಿದರು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಟಾಸ್ಕ್ ವೇಳೆ ಸ್ಪರ್ಧಿಗಳು ಜಗಳವಾಡುತ್ತ ನಿಂದಿಸುತ್ತಾ, ಮನಸ್ತಾಪ, ದೂರುಗಳಿಂದಲೇ ಕಾಲ ಕಳೆಯುವ ಇವರು ವಾರದ ಕೊನೆಯಲ್ಲಿ ನಗುವಿನ ಅಲೆಯಲ್ಲಿ ತೇಲುತ್ತಿರುತ್ತಾರೆ. ಈ ವಾರ ನಟ ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಲ್ಲಿ ನಟಿ ಶೃತಿ ವಾರಾಂತ್ಯದ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ಸದ್ಯ ಬಿಡುಗಡೆಯಾಗಿರುವ ಪ್ರೋಮೋ ಶನಿವಾರ ಹಾಗೂ ಭಾನುವಾರದ ಎಪಿಸೋಡ್ ಪ್ರೇಕ್ಷಕರ ನಿರೀಕ್ಷೆಯನ್ನು ಮತ್ತಷ್ಟು ಗರಿಗೆದರಿಸಿದೆ.