ಬೆಂಗಳೂರು: ರಾಮ ಮಂದಿರ ಉದ್ಘಾಟನೆಗೂ ಮುನ್ನವೇ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರ್ತಿದ್ದಾರೆ, BIETCಗೆ ಬರ್ತಿರೋ ನಮೋ ಚಾಮರಾಜನಗರಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ. ರಾಜ್ಯ ಬಿಜೆಪಿ ನಾಯಕರಲ್ಲಿ ಲೋಕಸಭಾ ರಣೋತ್ಸಾಹ ಬಂದಿದ್ದು ಹೊಸ ಹುರುಪಿನಲ್ಲಿದ್ದಾರೆ, ಬೆಂಗಳೂರಿನಲ್ಲಿ ನಮೋ ಬೃಹತ್ ರೋಡ್ ಶೋಗೆ ಕೇಸರಿ ನಾಯಕರು ಪ್ಲಾನ್ ಮಾಡ್ತಿದ್ದು ಲೋಕಸಮರಕ್ಕೆ ರಣಕಹಳೆ ಮೊಳಗಿಸಲು ಸಜ್ಜಾಗ್ತಿದ್ದಾರೆ ಕಮಲನಾಯಕರು..
ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ ಬಿಜೆಪಿ ಹೈಕಮಾಂಡ್ ನಾಯಕರು ರಾಮ ಜಪದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಕೇಸರಿನಾಯಕರಲ್ಲಿ ಲೋಕಸಭೆಯ ತಯಾರಿಯೂ ಆರಂಭವಾಗಿದೆ, ರಾಮ ಮಂದಿರ ಉದ್ಘಾಟನೆಗೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬರ್ತಿದ್ದಾರೆ.
ಜನವರಿ 19 ರಂದು ಬೆಂಗಳೂರಿನ ಏರೋಸ್ಪೇಸ್ ಇಂಜಿನಿಯರಿಂಗ್ ಸ್ಪೆಷಾಲಿಟಿ ಇಂಡಿಯಾ ಇಂಜಿನಿಯರಿಂಗ್ ಟೆಕ್ನಾಲಜಿ ಸೆಂಟರ್ಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಲೋಕಸಮರದ ರಣೋತ್ಸಾಹದಲ್ಲಿದ್ದಾರೆ ಸಿಲಿಕಾನ್ ಸಿಟಿಯಲ್ಲಿ ನಮೋ ಮೆಗಾ ರೋಡ್ ಶೊ ನಡೆಸಿ ಲೋಕಸಮರದ ರಣಕಹಳೆ ಮೊಳಗಿಸಲು ರಾಜ್ಯ ಬಿಜೆಪಿ ನಾಯಕರು ಪ್ಲಾನ್ ಮಾಡ್ತಿದ್ದಾರೆ..
ವಿಧಾನಸಭೆ ಚುನಾವಣೆಯ ನಂತರ 2ನೇ ಭಾರಿಗೆ ನಮೋ ರಾಜ್ಯಕ್ಕೆ ಬರ್ತಿದ್ದಾರೆ, ಈ ಹಿಂದೆ ಬೆಂಗಳೂರಿನ ಇಸ್ರೋ ಕಚೇರಿಗೆ ನರೇಂದ್ರಮೋದಿ ಆಗಮಿಸಿದ್ದ ವೇಳೆ ಬಿಜೆಪಿಯ ಯಾವುದೇ ಕಾರ್ಯಕರ್ತರನ್ನ ಭೇಟಿಯಾಗಿರಲಿಲ್ಲ. ಅದು ಸರ್ಕಾರಿ ಕಾರ್ಯಕ್ರಮವಾಗಿದ್ದರಿಂದ ಸಂಪೂರ್ಣವಾಗಿ ಪಕ್ಷದ ಪ್ರಮುಖರಿಂದ ಅಂತರವನ್ನು ಕಾಪಾಡಿಕೊಂಡಿದ್ದರು.
ಇದೀಗ ಆಗಮಿಸುತ್ತಿರು ಮೋದಿ ಅವರನ್ನ ಅದ್ಧೂರಿಯಾಗಿ ಸ್ವಾಗತಿಸಲು ಬಿಜೆಪಿ ತೀರ್ಮಾನಿಸಿದೆ. ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲು ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗಿದ್ದು, HAL ನಿಂದ BIETC ವರೆಗೆ ಬೃಹತ್ ರೋಡ್ ಶೋ ನಡೆಸಲು ಪ್ಲಾನ್ ಮಾಡಲಾಗ್ತಿದೆ. ಇಲ್ಲವೇ ಚಾಮರಾಜನಗರದಲ್ಲಿ ಬೃಹತ್ ರೋಡ್ ಶೋ ನಡೆಸಬೇಕೆಂಬ ಚಿಂತನೆ ಇದೆಯಾದರೂ ಪ್ರಧಾನಿ ಕಾರ್ಯಾಲಯದಿಂದ ಈವರೆಗೂ ಅನುಮತಿ ಸಿಕ್ಕಿಲ್ಲ..