ನವದೆಹಲಿ:- ಲೋಕಸಭೆಯಲ್ಲಿ ತಮ್ಮ ವಿರುದ್ಧ ಘೋಷಣೆ ಕೂಗುತ್ತಿದ್ದ ವಿಪಕ್ಷದವರಿಗೆ ಪ್ರಧಾನಿ ಮೋದಿ ಅವರು ನೀರು ಕೊಟ್ಟ ದೃಶ್ಯ ಸೆರೆಯಾಗಿದೆ.
BREAKING: ದರ್ಶನ್ ಖೈದಿ ನಂಬರಿನಲ್ಲಿ ಮಗುವಿನ ಪೊಟೋ ಶೂಟ್: ಸಂಕಷ್ಟದಲ್ಲಿ ಪೋಷಕರು!
ಮೋದಿ ಕಾಂಗ್ರೆಸ್ ಅನ್ನು ಅರಾಜಕತೆಯನ್ನು ಹರಡುವ ಪಕ್ಷ ಎಂದು ಕರೆದರು, ಎಷ್ಟೇ ಆಲೋಚಿಸಿದರೂ ನಿಮ್ಮ ಉದ್ದೇಶ ಎಂದೂ ಈಡೇರುವುದಿಲ್ಲ ಎಂದು ಹೇಳಿದರು
ಆ ಸಮಯದಲ್ಲಿ ಪ್ರತಿಪಕ್ಷಗಳ ಸಂಸದರು ಸದನದ ಬಾವಿಗಿಳಿದು ಪ್ರಧಾನಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಗ ಪ್ರಧಾನಿ ಮೋದಿ ನಾಯಕರಿಗೆ ಒಂದು ಲೋಟ ನೀರು ನೀಡಿದರು. ಘೋಷಣೆ ಕೂಗುತ್ತಿದ್ದ ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಗೋರ್ ಅವರಿಗೆ ಮೋದಿ ನೀರಿನ ಲೋಟವನ್ನು ನೀಡಿದರು ಆದರೆ ಅವರು ಪ್ರಧಾನಿ ಕೈಯಿಂದ ನೀರು ತೆಗೆದುಕೊಳ್ಳಲು ನಿರಾಕರಿಸಿದರು.
ನಂತರ ಪ್ರಧಾನಿ ಮೋದಿ ಮತ್ತೊಬ್ಬ ಸಂಸದ ಹಿಬಿ ಈಡನ್ ಅವರಿಗೆ ಕೊಟ್ಟರು. ಲೋಟ ತೆಗೆದುಕೊಂಡು ನೀರು ಕುಡಿದರು,ಹೈಬಿ ಈಡನ್ ಕೇರಳದ ಎರ್ನಾಕುಲಂ ಕ್ಷೇತ್ರದ ಕಾಂಗ್ರೆಸ್ ಸಂಸರಾಗಿದ್ದಾರೆ. ಈ ಪೋಸ್ಟ್ ಅನ್ನು ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ