ಬೆಂಗಳೂರು: ತಾಂತ್ರಿಕ ದೋಷದಿಂದ ಪೀಣ್ಯ ನಿಲ್ದಾಣದಲ್ಲಿ (Peenya Metro Station) ಮೆಟ್ರೋ ರೈಲು ಕೆಟ್ಟು ನಿಂತಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ.
ಬೆಳಗ್ಗೆ 10 ಗಂಟೆಯ ವೇಳೆಗೆ ರೈಲು ಕೆಟ್ಟು ನಿಂತಿದ್ದು ಹಸಿರು ಮಾರ್ಗದ ಮೆಟ್ರೋ (Green Line Metro) ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಹಸಿರು ಮಾರ್ಗದಲ್ಲಿ ಬರುವ ಯಶವಂತಪುರ ಟೂ ನಾಗಸಂದ್ರ ಮಾರ್ಗ ನಾಗಸಂದ್ರ ಟೂ ಯಶವಂತಪುರ ಮೆಟ್ರೋ ನಡೆವೆ ಸಂಚಾರ ಇಲ್ಲ ನಾಗಸಂದ್ರ ಟೂ ಯಶವಂತಪುರ- ಯಶವಂತಪುರ ಟೂ ನಾಗಸಂದ್ರ ಒಂದು ಗಂಟೆಯಿಂದ ಎರಡು ಕಡೆಯಿಂದಲೂ ಮೆಟ್ರೋ ರೈಲು ಸಂಚಾರ ಮಾಡ್ತಿಲ್ಲ ಮೆಟ್ರೋ ರೈಲು ಸಂಚಾರವಿಲ್ಲದೆ ವಾಪಸ್ಸು ಹೋಗುತ್ತಿರುವ ಪ್ರಯಾಣಿಕರು
ಸದ್ಯ ಯಶವಂತಪುರ – ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮಾತ್ರ ಮೆಟ್ರೋ ಸಂಚಾರ ನಡೆಸುತ್ತಿದ್ದು ಪೀಣ್ಯ – ನಾಗಸಂದ್ರ ರೈಲು ಸಂಚಾರ ಸ್ಥಗಿತಗೊಂಡಿದೆ. ಮುಂದಿನ 2 ಗಂಟೆಯ ಒಳಗಡೆ ತಾಂತ್ರಿಕ ದೋಷವನ್ನು ಸರಿಪಡಿಸಲಾಗುವುದು ಎಂದು ಬಿಎಂಆರ್ಸಿಎಲ್ ತಿಳಿಸಿದೆ.